ಗೋಹತ್ಯೆ ನಿಷೇಧವನ್ನು ಇಡೀ ದೇಶದಲ್ಲೇ ಮಾಡಿಸಲಿ: ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡಿಸುವುದಾಗಿ ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅವರಿಗೆ ಗೋವುಗಳ ಬಗ್ಗೆ ಪ್ರೀತಿ ಇದ್ದರೆ ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿಸಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನಕ್ಕೆ ಜಿಗಿದಿದೆ. ಪ್ರತಿ ವರ್ಷ ಶೇ 14ರಷ್ಟು ಹೆಚ್ಚಳವಾಗಿದೆ‌. 2015-16ನೇ ಸಾಲಿನಲ್ಲಿ ₹ 26,682 ಕೋಟಿ […]

ಅಂಗವಿಕಲರಿಗೆ ಪ್ಯಾರಾಗ್ಲ್ಯಾಡಿಂಗ್​ ಮೂಲಕ ಮತದಾನದ ಅರಿವು

ಉತ್ತರಕನ್ನಡ :ಕಾರವಾರ ರವೀಂದ್ರನಾಥ ಟ್ಯಾಗೋರ್​ ಕಡಲತೀರದಲ್ಲಿ ವಿನೂತನವಾಗಿ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಗವಿಕಲರಿಗೆ ಪ್ಯಾರಾಗ್ಲ್ಯಾಡಿಂಗ್​ ಮೂಲಕ ಅರಿವು ಮೂಡಿಸಲಾಗಿದೆ. ಇನ್ನು ಪ್ಯಾರಾಚೂಟ್​ನಲ್ಲಿ ಹಾರಾಡಿದ ಅಂಗವಿಕಲರು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಎಸ್​.ಎಸ್​.ನಕುಲ್​ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಹಾಕಬೇಕು ಎಂದು ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಚುನಾವಣೆ ಬಳಿಕ ಲಿಂಗಾಯತ ಧರ್ಮ ಕುರಿತು ನಿಲುವು: ಅಮಿತ್‌ ಶಾ

ಮೈಸೂರು: ವಿಧಾನಸಭಾ ಚುನಾವಣೆ ಬಳಿಕ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ಶನಿವಾರ ತಿಳಿಸಿದರು. ‘ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಗಳೊಂದಿಗೆ ನಾವು ಚೆಲ್ಲಾಟ ಆಡುವುದಿಲ್ಲ. ಅಷ್ಟಕ್ಕೂ ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ರಾಜ್ಯ ಸರ್ಕಾರದ ಶಿಫಾರಸು ಪತ್ರ ಇದುವರೆಗೆ ಕೇಂದ್ರ ಸರ್ಕಾರ ತಲುಪಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಯಡಿಯೂರಪ್ಪ ಅವರನ್ನು ಮಖ್ಯಮಂತ್ರಿ ಮಾಡದಂತೆ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಂತ್ರ ರೂಪಿಸಿದ್ದಾರೆ. […]

ಪವರ್‌ಸ್ಟಾರ್ ಬರ್ತ್‌ಡೇಗೆ ಶಿವಮೊಗ್ಗ ಹುಡುಗರ ಹಾಡು ನಾಳೆ ಬಿಡುಗಡೆ

ಶಿವಮೊಗ್ಗ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇಯನ್ನು ಮಾರ್ಚ್ 17ರ ಶನಿವಾರ ಅದ್ದೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ಸಿದ್ದತೆ ನಡೆಸಿದ್ದಾರೆ. ಈ ಸಂಭ್ರಮಕ್ಕೆ ತಾವೂ ಸಹ ಭಾಗಿಯಾಗಲು ಅಪ್ಪು ಅವರ ಶಿವಮೊಗ್ಗದ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಾಗಿ ವಿಶೇಷ ಕೊಡುಗೆಯೊಂದನ್ನು ಸಿದ್ದಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾದ ಶಿವಮೊಗ್ಗದ ಹುಡುಗ ಸುರೇಶ್ ಅಪ್ಪು, ತಮ್ಮ ನೆಚ್ಚಿನ ನಟನಿಗಾಗಿ ಒಂದು ವಿಶೇಷ ಹಾಡನ್ನು ಹಾಡಿದ್ದು, ಇದು ನಾಳೆ ಲೋಕಾರ್ಪಣೆಗೊಳ್ಳಲಿದೆ. ಅಪ್ಪು ಅವರಿಗಾಗಿ ವಿಶೇಷವಾಗಿ ಸಿದ್ದಪಡಿಸಲಾಗಿರುವ ಈ ಹಾಡನ್ನು ರಾಗಿ […]