ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ- ಮಗ ಸೇರಿ ಮೂವರ ಸಾವು

ಕಲಬುರ್ಗಿ: ತಾಲ್ಲೂಕಿನ ಕವಲಗಾ(ಕೆ) ಗ್ರಾಮದಲ್ಲಿ ಸಾರ್ವಜನಿಕ ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ-ಮಗ ಸೇರಿ ಮೂವರು ಬುಧವಾರ ಮೃತಪಟ್ಟಿದ್ದಾರೆ. ಚನ್ನಣ್ಣ ಚೌಡಪ್ಪ ಚೌಡಪ್ಪಗೋಳ (59), ಇವರ ಮಗ ಮಲ್ಲಿನಾಥ ಅಲಿಯಾಸ ಮಲ್ಲು (35), ಮಹಿಬೂಬಸಾಬ ನಬಿಸಾಬ ಕೂಡಿ (38) ಮೃತಪಟ್ಟವರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಉಲ್ಬಣಗೊಂಡಿದೆ. ಹೀಗಾಗಿ ಹಳೆಯ ಕಾಲದ ಸಾರ್ವಜನಿಕ ಬಾವಿಯನ್ನು ಸ್ವಚ್ಛಗೊಳಿಸಲೆಂದು ಇವರು ಬಾವಿಗೆ ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಪಶ್ಚಿಮ ಬಂಗಾಳ ಹಿಂದೂಗಳಿಗೆ ಸುರಕ್ಷಿತವಲ್ಲ; ಮಮತಾ ಬ್ಯಾನರ್ಜಿ ಶೂರ್ಪನಖಿ: ಬಿಜೆಪಿ ಶಾಸಕ

ನವದೆಹಲಿ: ಉತ್ತರಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶೂರ್ಪನಖಿ ಎಂದು ಕರೆದಿದ್ದಾರೆ. ಶೂರ್ಪನಖಿ ಹುಟ್ಟಿದರೆ ಲಕ್ಷ್ಮಣ ಆಕೆಯನ್ನು ಕೊಲ್ಲುತ್ತಾನೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಈ ಶೂರ್ಪನಖಿ (ಮಮತಾಬ್ಯಾನರ್ಜಿ)ಯ ಮೂಗನ್ನು ಕತ್ತರಿಸುತ್ತಾರೆ ಎಂದು ಸಿಂಗ್ ಹೇಳಿದ್ದಾರೆ. ಆನಂತರ ಶೂರ್ಪನಖಿ ಹೇಳಿಕೆ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಸಿಂಗ್, ಪಶ್ಚಿಮ ಬಂಗಾಳದಲ್ಲಿ ರಸ್ತೆಯಲ್ಲಿಯೇ ಜನರ ಹತ್ಯೆ ನಡೆಯುತ್ತಿದ್ದರೂ ಬ್ಯಾನರ್ಜಿಯವರು ಸುಮ್ಮನಿದ್ದಾರೆ. ಬಂಗಾಳದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ ಎಂದು ಹೇಳಿದ್ದಾರೆ. […]

ಎಚ್‌.ಡಿ ಕೋಟೆ ಬಿಜೆಪಿ ಅಭ್ಯರ್ಥಿ ಸಿದ್ದರಾಜು ವಿರುದ್ಧದ ಪ್ರಕರಣ: ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು: ಮೈಸೂರು ಜಿಲ್ಲೆ ಎಚ್‌.ಡಿ ಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದರಾಜು ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿದೆ. ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಜು ಪಡೆಯುವ ಯಾವುದೇ ಸೌಲಭ್ಯಗಳು, ಅವರ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಹೇಳಿದೆ. ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಈ ಕುರಿತಂತೆ ಆದೇಶಿಸಿದೆ.

ಚಾಂಪಿಯನ್ಸ್ ಟ್ರೋಫಿ ಓಕೆ, ಟಿ20 ಯಾಕೆ: ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ವಿರೋಧ

ಕೋಲ್ಕತಾ: 2021 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲು ನಿರ್ಧರಿಸಿರುವ ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಈಗಾಗಲೇ 2020ರಲ್ಲಿ ವಿಶ್ವ ಟಿ20 ಚಾಂಪಿಯನ್ ಷಿಪ್ ಆಯೋಜನೆಯಾಗಿದ್ದು, ಮತ್ತೆ 2021ರಲ್ಲಿ ಚಾಂಪಿಯನ್ಸ್ ಟ್ರೋಫಿ ಸರಣಿಯನ್ನೂ ಕೂಡ ಟಿ20 ಮಾದರಿಯಲ್ಲಿ ಆಡಿಸುವ ಐಸಿಸಿ ನಿರ್ಧಾರ ಸರಿಯಲ್ಲ ಎಂದು ಬಿಸಿಸಿಐ ಹೇಳಿದೆ. ಅಲ್ಲದೆ ಐಸಿಸಿ ಈ ನಿರ್ಧಾರಕ್ಕೆ ತಾನು ಸಹಿ ಹಾಕುವುದಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ. ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಟಿ20 ಮಾದರಿಯಲ್ಲಿ ಆಡಿಸಲು […]

ಸಿಎಂ ಗೆಲ್ಲಿಸಲು ಬಾದಾಮಿ ರಣಾಂಗಣಕ್ಕೆ ಮಹಾ ಸೇನೆ,ಸತೀಶ್‌ ಜಾರಕಿಹೊಳಿ!

ಬಾದಾಮಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಾದಾಮಿಯಲ್ಲಿ ಜಿದ್ದಾಜಿದ್ದಿನ ರಣಕಣ ನಿರ್ಮಾಣವಾಗಿದ್ದು ಸದ್ಯ ಜಾತಿ ರಾಜಕೀಯದ ಅಖಾಡವಾಗಿ ಬದಲಾಗಿದೆ. ಸತೀಶ್‌ ಜಾರಕಿಹೋಳಿ ಕ್ಷೇತ್ರಕ್ಕೆ ಎಂಟ್ರಿ! ವಾಲ್ಮೀಕಿ ಸಮುದಾಯದ ನಾಯಕ ಸತೀಶ್‌ ಜಾರಕಿಹೊಳಿ ಸಿಎಂ ನಾಮಪತ್ರ ಸಲ್ಲಿಸುವಾಗಲೇ ಕ್ಷೇತ್ರಕ್ಕೆ ಆಗಮಿಸಿದ್ದು, ತಮ್ಮ ಸಮುದಾಯದ ನಿರ್ಣಾಯಕ ಮತಗಳು ಶ್ರೀರಾಮುಲುವತ್ತ ಹೋಗದಂತೆ ಮಾಡಲು ರಣ ತಂತ್ರ ಆರಂಭಿಸಿದ್ದಾರೆ. ಮಂಗಳವಾರ ರಾತ್ರಿ 2 ಗಂಟೆಗೂ ಹೆಚ್ಚು ಕಾಲ ಬಾದಾಮಿಯ ಕೃಷ್ಣ ಹೆರಿಟೇಜ್‌ ನಲ್ಲಿ ಸತೀಶ್‌ ಜಾರಕಿಹೊಳಿ ಮತ್ತು ಸಿಎಂ ಸಿದ್ದರಾಮಯ್ಯ […]

ಜನಾರ್ದನ ರೆಡ್ಡಿ ಬಿಜೆಪಿಯ ತಾರಾ ಪ್ರಚಾರಕ ಅಲ್ಲ: ವಾಮನಾಚಾರ್ಯ

ಹುಬ್ಬಳ್ಳಿ: ‘ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿಯ ತಾರಾ ಪ್ರಚಾರಕ ಅಲ್ಲ. ಪಕ್ಷ ಅವರನ್ನು ಪ್ರಚಾರಕ್ಕೂ ಕರೆದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಅವರು ಪ್ರಚಾರ ಮಾಡಬಹುದು’ ಎಂದು ಬಿಜೆಪಿ ರಾಜ್ಯ ವಕ್ತಾರ ಡಾ. ವಾಮನಾಚಾರ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ವಿಭಾಗ ಮಟ್ಟದ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನಾರ್ದನ ರೆಡ್ಡಿ ಮತ್ತು ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ’ ಎಂದರು. ‘ಜನಾರ್ದನ ರೆಡ್ಡಿ ಅವರಿಂದ ಪಕ್ಷಕ್ಕೆ […]

ನಾಮಪತ್ರ ಸಲ್ಲಿಕೆಗೆ ಗೊಂದಲದ ತೆರೆ: ನಾಮಪತ್ರ ವಾಪಸ್‌ಗೆ ಇದೇ 27 ಕೊನೆ ದಿನ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಮುಕ್ತಾಯವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮತ್ತು ಪಕ್ಷೇತರರಿಂದ ಒಟ್ಟು 3,943 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಅವಧಿ ಮುಗಿಯುತ್ತಾ ಬಂದಿದ್ದರೂ ರಾಜಕೀಯ ಪಕ್ಷಗಳಲ್ಲಿ ಗೊಂದಲ ಮನೆ ಮಾಡಿತ್ತು. ಮೂರೂ ಪ್ರಮುಖ ಪಕ್ಷಗಳು ಗೊಂದಲದ ಕಾರಣ ಕೆಲವು ಕ್ಷೇತ್ರಗಳಲ್ಲಿ ಕೊನೆಯ ಕ್ಷಣದಲ್ಲಿ ನೇರವಾಗಿ ‘ಬಿ ಫಾರಂ’ ನೀಡುವ ಮೂಲಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಭಾರಿ ಪೈಪೋಟಿ ಏರ್ಪಟ್ಟಿರುವ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ […]

ಮಂಡ್ಯದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗಣಿಗ ಪಿ. ರವಿಕುಮಾರ್ ಗೌಡ

ಮಂಡ್ಯದಿಂದ ಮಾಜಿ ಸಚಿವ ಅಂಬರೀಷ್‌ ಅವರಿಗೆ ಟಿಕೆಟ್‌ ನೀಡಿದ್ದರೂ ಅವರು ಕಣಕ್ಕಿಳಿಯದ ಕಾರಣ ಅಭ್ಯರ್ಥಿಯನ್ನು ಬದಲಿಸಿರುವ ಕಾಂಗ್ರೆಸ್‌ ಹೈಕಮಾಂಡ್, ಗಣಿಗ ಪಿ. ರವಿಕುಮಾರ್ ಗೌಡ ಅವರಿಗೆ ‘ಬಿ’ ಫಾರಂ ವಿತರಿಸಿದೆ. ಮಂಡ್ಯ: ಕಾಂಗ್ರೆಸ್‌ನಲ್ಲಿ ಕೊನೆಯ ದಿನದವರೆಗೆ ಗೊಂದಲದ ಗೂಡಾಗಿದ್ದ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರಕ್ಕೆ ಪಕ್ಷದ ಹೈಕಮಾಂಡ್‌ ಮಂಗಳವಾರ ಮಧ್ಯಾಹ್ನದ ವೇಳೆಗೆ ತೆರೆ ಎಳೆದಿದ್ದು, ಗಣಿಗ ಪಿ. ರವಿಕುಮಾರ್‌ ಅವರಿಗೆ ಟಿಕೆಟ್‌ ನೀಡಿದೆ. ಮಂಡ್ಯದಿಂದ ಮಾಜಿ ಸಚಿವ ಅಂಬರೀಷ್‌ ಅವರಿಗೆ ಟಿಕೆಟ್‌ ನೀಡಿದ್ದರೂ ಅವರು ಕಣಕ್ಕಿಳಿಯದ […]

ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಕೃಷ್ಣ ಸಾವಿರ ಕೋಟಿ ಒಡೆಯ!

ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಗಮನಸೆಳೆದದ್ದು ಗೋವಿಂದರಾಜನಗರ ಕ್ಷೇತ್ರದ ಯುವ ಅಭ್ಯರ್ಥಿ ಪ್ರಿಯಕೃಷ್ಣ ಅವರು ಸಲ್ಲಿಸಿದ ಆಸ್ತಿ ವಿವರ. ಶುಕ್ರವಾರ ಬೆಂಬಲಿಗರ ಮೂಲಕ ಒಂದು ಸೆಟ್‌ ದಾಖಲೆ ಸಲ್ಲಿಸಿರುವ ಪ್ರಿಯಕೃಷ್ಣ, ಶನಿವಾರ ಖುದ್ದಾಗಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಮತ್ತೂಂದು ಸೆಟ್‌ ದಾಖಲೆಗಳನ್ನು ಸಲ್ಲಿಸಲಿದ್ದಾರೆ. ಮೊದಲ ಸೆಟ್‌ನಲ್ಲಿ ಪ್ರಿಯಕೃಷ್ಣ ಘೋಷಿಸಿರುವ ಆಸ್ತಿ ಮೌಲ್ಯ ಬರೋಬ್ಬರಿ 1020.53 ಕೋಟಿ ರೂ! ಬೆಂಗಳೂರು: ಗೃಹ ಸಚಿವ ರಾಮಲಿಂಗಾ ರೆಡ್ಡಿ, ವಸತಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಸಚಿವರಾದ ಸುರೇಶ್‌ಕುಮಾರ್‌, ಜಮೀರ್‌ ಅಹಮದ್‌, […]

ಗೇಲ್, ವಾಟ್ಸನ್ ಕೈಬಿಟ್ಟಿರುವುದು ಆರ್‌ಸಿಬಿಗೆ ತುಂಬಲಾರದ ನಷ್ಟ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಕ್ರಿಸ್ ಗೇಲ್ ಹಾಗೂ ಶೇನ್ ವಾಟ್ಸನ್ ತಮ್ಮ ತಮ್ಮ ಫ್ರಾಂಚೈಸಿಗಳ ಪರ ಅಮೋಘ ಶತಕಗಳನ್ನು ಬಾರಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಗೇಲ್ ಐಪಿಎಲ್‌ನಲ್ಲಿ ದಾಖಲೆಯ ಆರನೇಯ ಶತಕ ಸಿಡಿಸಿದ್ದರು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿರುವ ವಾಟ್ಸನ್, ಐಪಿಎಲ್‌ನಲ್ಲಿ ಮೂರನೇ ಶತಕ ಸಾಧನೆ ಮಾಡಿದ್ದಾರೆ. ಅತ್ತ ಗೇಲ್ ಹಾಗೂ ವಾಟ್ಸನ್ ಅವರನ್ನು ಕೈಬಿಟ್ಟಿರುವುದು ಬೆಂಗಳೂರಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸುತ್ತಿದೆ. ಈ ಪೈಕಿ […]