ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರ ವಿಫಲ: ಸುಪ್ರೀಂಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ತಮಿಳುನಾಡು

ನವದೆಹಲಿ: ನಿಗದಿತ ಸಮಯದಲ್ಲಿ ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚನೆ ಮಾಡಲು ವಿಫಲವಾದ ಕೇಂದ್ರ ಸರ್ಕಾರ ವಿರುದ್ಧ ತಮಿಳುನಾಡು ಸರ್ಕಾರ ಶನಿವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಕೋರ್ಟ್‌ ನೀಡಿದ್ದ ಗಡುವು ಮಾರ್ಚ್‌ 29ಕ್ಕೆ ಮುಗಿದಿದ್ದು, ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ತಮಿಳುನಾಡು ಸರ್ಕಾರ, ಕೇಂದ್ರದ ಮೇಲೆ ಒತ್ತಡ ಹೇರಿತ್ತು. ಇದೀಗ ನ್ಯಾಯಾಂಗ ನಿಂದನೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಗಮನ ಸೆಳೆದಿದೆ. ನದಿ ವಿವಾದ ಕುರಿತು ಫೆ.16ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಆರು ವಾರಗಳಲ್ಲಿ ನಿರ್ವಹಣಾ ಮಂಡಳಿ ರಚಿಸುವಂತೆ […]

ಫೈಟ್‌ ಏನು,ಕುಸ್ತಿ ಮಾಡೋದಾ?ಚಾಮುಂಡೇಶ್ವರಿಯಲ್ಲಿ ಸಿಎಂ ಹೇಳಿದ್ದೇನು?

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣಕ್ಕಿಳಿಯುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು ಇಂದು ಶನಿವಾರದಿಂದ 3 ದಿನಗಳ ಕಾಲ ಕ್ಷೇತ್ರಾದ್ಯಂತ ಎಡೆ ಬಿಡದೆ ಪ್ರಚಾರ ನಡೆಸಲಿದ್ದಾರೆ. ಲಕ್ಷ್ಮೀಪುರಂನಲ್ಲಿ ಸುದ್ದಿಗಾರರ ಪ್ರಶ್ನೆ ಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಟೈಟ್‌ ಫೈಟ್‌ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ ‘ಫೈಟ್‌ ಏನು ಒಬ್ರಿಗೊಬ್ರು ಕುಸ್ತಿ ಆಡೋದಾ ? ಫೈಟ್‌ ಏನೂ ಇಲ್ಲ , ಜನ ತೀರ್ಮಾನ ಮಡುವುದು. ಅವರ ಒಲವು ನಮ್ಮ ಪರ ಇದೆ’ ಎಂದರು. ‘ಮೇ 15 […]

ರಾಣಿಬೆನ್ನೂರಿನಿಂದ ಸ್ಪರ್ಧಿಸಲ್ಲ: ಬಿವೈಆರ್‌

ಶಿವಮೊಗ್ಗ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಾವು ರಾಣಿಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕಾರಿಪುರ ಕ್ಷೇತ್ರ ತಮಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಶಿವಮೊಗ್ಗ ಜಿಲ್ಲೆ ಅಥವಾ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುವೆ. ಇದನ್ನು ಹೊರತುಪಡಿಸಿ,ಹೊರಗಿನ ಜಿಲ್ಲೆಯ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವ ಇಚ್ಛೆ ಹೊಂದಿಲ್ಲ ಎಂದರು.

ಅಮೆರಿಕ ವೀಸಾ ಬೇಕಿದ್ರೆ ಫೋನ್, ಇಮೇಲ್, ಫೇಸ್ ಬುಕ್ ಮಾಹಿತಿ ಕೊಡಿ

ವಾಷಿಂಗ್ಟನ್‌: ಇನ್ನು ಮುಂದೆ ಅಮೆರಿಕದ ವೀಸಾ ಕೋರಿ ಅರ್ಜಿ ಸಲ್ಲಿಸುವವರು ತಮ್ಮ ಫೋನ್, ಇಮೇಲ್ ವಿಳಾಸ ಹಾಗೂ ಫೇಸ್‌ಬುಕ್‌ ವಿವರ ನೀಡಬೇಕು ಎಂದು ಟ್ರಂಪ್ ಸರಕಾರ ಸೂಚಿಸಿದೆ. ದೇಶದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಮತ್ತು ದೇಶಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿಗಳನ್ನು ತಡೆಯುವುದಕ್ಕಾಗಿ ತಪಾಸಣೆ ಪ್ರಕ್ರಿಯೆ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸರಕಾರ ಹೇಳಿದೆ. ವಲಸೆ ರಹಿತ ವೀಸಾದಡಿ ಅಮೆರಿಕಕ್ಕೆ ಬರುವವರು ಹೊಸ ನಿಯಮಗಳನ್ನು ಒಳಗೊಂಡ ಪ್ರಶ್ನೆಗಳ ಪಟ್ಟಿಗೆ ಉತ್ತರ ನೀಡಬೇಕು ಎಂದು ‘ಫೆಡರಲ್ ರಿಜಿಸ್ಟರ್ ‘ […]

ಗೋಹತ್ಯೆ ನಿಷೇಧವನ್ನು ಇಡೀ ದೇಶದಲ್ಲೇ ಮಾಡಿಸಲಿ: ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡಿಸುವುದಾಗಿ ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅವರಿಗೆ ಗೋವುಗಳ ಬಗ್ಗೆ ಪ್ರೀತಿ ಇದ್ದರೆ ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿಸಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನಕ್ಕೆ ಜಿಗಿದಿದೆ. ಪ್ರತಿ ವರ್ಷ ಶೇ 14ರಷ್ಟು ಹೆಚ್ಚಳವಾಗಿದೆ‌. 2015-16ನೇ ಸಾಲಿನಲ್ಲಿ ₹ 26,682 ಕೋಟಿ […]

ಅಂಗವಿಕಲರಿಗೆ ಪ್ಯಾರಾಗ್ಲ್ಯಾಡಿಂಗ್​ ಮೂಲಕ ಮತದಾನದ ಅರಿವು

ಉತ್ತರಕನ್ನಡ :ಕಾರವಾರ ರವೀಂದ್ರನಾಥ ಟ್ಯಾಗೋರ್​ ಕಡಲತೀರದಲ್ಲಿ ವಿನೂತನವಾಗಿ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಗವಿಕಲರಿಗೆ ಪ್ಯಾರಾಗ್ಲ್ಯಾಡಿಂಗ್​ ಮೂಲಕ ಅರಿವು ಮೂಡಿಸಲಾಗಿದೆ. ಇನ್ನು ಪ್ಯಾರಾಚೂಟ್​ನಲ್ಲಿ ಹಾರಾಡಿದ ಅಂಗವಿಕಲರು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಎಸ್​.ಎಸ್​.ನಕುಲ್​ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಹಾಕಬೇಕು ಎಂದು ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಚುನಾವಣೆ ಬಳಿಕ ಲಿಂಗಾಯತ ಧರ್ಮ ಕುರಿತು ನಿಲುವು: ಅಮಿತ್‌ ಶಾ

ಮೈಸೂರು: ವಿಧಾನಸಭಾ ಚುನಾವಣೆ ಬಳಿಕ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ಶನಿವಾರ ತಿಳಿಸಿದರು. ‘ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಗಳೊಂದಿಗೆ ನಾವು ಚೆಲ್ಲಾಟ ಆಡುವುದಿಲ್ಲ. ಅಷ್ಟಕ್ಕೂ ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ರಾಜ್ಯ ಸರ್ಕಾರದ ಶಿಫಾರಸು ಪತ್ರ ಇದುವರೆಗೆ ಕೇಂದ್ರ ಸರ್ಕಾರ ತಲುಪಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಯಡಿಯೂರಪ್ಪ ಅವರನ್ನು ಮಖ್ಯಮಂತ್ರಿ ಮಾಡದಂತೆ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಂತ್ರ ರೂಪಿಸಿದ್ದಾರೆ. […]

ಪವರ್‌ಸ್ಟಾರ್ ಬರ್ತ್‌ಡೇಗೆ ಶಿವಮೊಗ್ಗ ಹುಡುಗರ ಹಾಡು ನಾಳೆ ಬಿಡುಗಡೆ

ಶಿವಮೊಗ್ಗ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇಯನ್ನು ಮಾರ್ಚ್ 17ರ ಶನಿವಾರ ಅದ್ದೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ಸಿದ್ದತೆ ನಡೆಸಿದ್ದಾರೆ. ಈ ಸಂಭ್ರಮಕ್ಕೆ ತಾವೂ ಸಹ ಭಾಗಿಯಾಗಲು ಅಪ್ಪು ಅವರ ಶಿವಮೊಗ್ಗದ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಾಗಿ ವಿಶೇಷ ಕೊಡುಗೆಯೊಂದನ್ನು ಸಿದ್ದಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾದ ಶಿವಮೊಗ್ಗದ ಹುಡುಗ ಸುರೇಶ್ ಅಪ್ಪು, ತಮ್ಮ ನೆಚ್ಚಿನ ನಟನಿಗಾಗಿ ಒಂದು ವಿಶೇಷ ಹಾಡನ್ನು ಹಾಡಿದ್ದು, ಇದು ನಾಳೆ ಲೋಕಾರ್ಪಣೆಗೊಳ್ಳಲಿದೆ. ಅಪ್ಪು ಅವರಿಗಾಗಿ ವಿಶೇಷವಾಗಿ ಸಿದ್ದಪಡಿಸಲಾಗಿರುವ ಈ ಹಾಡನ್ನು ರಾಗಿ […]

ಮಾರ್ಚ್ 2ರಂದು ಶರಾವತಿ ಜಲವಿದ್ಯುದಾಗಾರ ಲೋಕಾರ್ಪಣೆ

ಕಾರ್ಗಲ್  ಸಮೀಪದ ಎಬಿ ಸೈಟ್‌ನಲ್ಲಿರುವ ನವೀಕರಣಗೊಂಡ ಶರಾವತಿ ಜಲವಿದ್ಯುದಾಗಾರವನ್ನು ಮಾರ್ಚ್ 2ರಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. 2016ರ ಡಿ.18ರಂದು ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಶರಾವತಿ ಜಲವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ 10 ಘಟಕಗಳು ಸಂಪೂರ್ಣವಾಗಿ ಸ್ತಬ್ಧಗೊಂಡವು. ಸರ್ಕಾರ ಇದನ್ನು ಸವಾಲಾಗಿ ಸ್ವೀಕರಿಸಿ, ನಿಗಮಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿತು. ಕೇವಲ 34 ದಿವಸಗಳಲ್ಲಿ ಒಂದು ವಿದ್ಯುತ್ ಘಟಕ ಉತ್ಪಾದನೆಯಲ್ಲಿ […]