ರಸ್ತೆ ಬದಿಯಲ್ಲಿ ಬಿಪಿಎಲ್‌ ಕಾರ್ಡ್‌ಗಳು

ಶಿವಮೊಗ್ಗ : ನಗರದ ಮಂಜುನಾಥ ಬಡಾವಣೆ ಕೆಎಸ್‌ಆರ್‌ಟಿಸಿ ಡಿಪೊ ರಸ್ತೆ ಬದಿಯಲ್ಲಿ ಮಂಗಳವಾರ ಸಂಜೆ ಒಂದು ಚೀಲ ಬಿಪಿಎಲ್‌ ಕಾರ್ಡ್‌ಗಳು ಪತ್ತೆಯಾಗಿವೆ. ಲ್ಯಾಮಿನೇಷನ್‌ ಮಾಡಿದ ಪ್ಲಾಸ್ಟಿಕ್‌ಕಾರ್ಡ್‌ಗಳನ್ನು ಚೀಲದ ತುಂಬ ತುಂಬಿ ರಸ್ತೆ ಬದಿಯಲ್ಲಿ ಎಸೆಯಲಾಗಿದೆ. ಕಾರ್ಡ್‌ಗಳು ತರೀಕೆರೆ ತಾಲೂಕಿಗೆ ಸಂಬಂಧಿಸಿದ್ದಾಗಿವೆ. ಕಾರ್ಡ್‌ಗಳನ್ನು ಗಮನಿಸಿದ ಸಾರ್ವಜನಿಕರು ಫೋಟೊ ತೆಗೆದು ವಾಟ್ಸ್ಯಾಪ್‌ ಮಾಡಿದ್ದು ವೈರಲ್‌ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ಕಾರ್ಡ್‌ಗಳನ್ನು ಸಂಗ್ರಹಿಸಿ ತನಿಖೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು. ಅಧಿಕಾರಿಗಳು ಕಾರ್ಡ್‌ಗಳನ್ನು […]

ಪ್ರಸನ್ನಕುಮಾರ್‌ಗೆ ಅದೃಷ್ಟ ಪರೀಕ್ಷೆ, ಈಶ್ವರಪ್ಪಗೆ ಅಗ್ನಿಪರೀಕ್ಷೆ

ಶಿವಮೊಗ್ಗ : ಬಿಜೆಪಿ ಸರಕಾರದ ಅವಧಿಯಲ್ಲಿ ಅಭಿವೃದ್ಧಿ, ಅನುದಾನದ ಹೊಳೆ ಹರಿಸಿದರೂ ಸೋಲು ತಪ್ಪಿಸಿಕೊಳ್ಳಲಾಗದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪರಿಗೆ ಈ ಬಾರಿ ‘ಅಗ್ನಿಪರೀಕ್ಷೆ’. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಇಲ್ಲದೆಯೂ ‘ಗೆಲ್ಲಬಲ್ಲೆ ‘ಎಂದು ಸವಾಲು ಹಾಕಿ ಸೋತುಸುಣ್ಣವಾದ ಅವರಿಗೆ ಈಗ ಬಿಎಸ್‌ವೈ ಜತೆಗಿದ್ದರೂ ಕ್ಷೇತ್ರ ಬಿಟ್ಟು ಕದಲಲಾಗದ ಪರಿಸ್ಥಿತಿ ತಂದೊಡ್ಡಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್‌ಗೆ ಕೆ.ಎಸ್‌.ಈಶ್ವರಪ್ಪರೇ ಎದುರಾಳಿ. ಇವರೊಂದಿಗೆ ಜೆಡಿಎಸ್‌ನ ನಿವೃತ್ತ ಎಂಜಿನಿಯರ್‌ ಎಚ್‌.ಎನ್‌.ನಿರಂಜನ್‌, ಜೆಡಿಎಸ್‌ ಟಿಕೆಟ್‌ ವಂಚಿತ ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ(ಬಾಬಣ್ಣ) ಸೇರಿದಂತೆ […]

‘ಕೈ ಉತ್ಪನ್ನಕ್ಕೆ ಜಿಎಸ್‌ಟಿ ರದ್ದು ಮಾಡದ ಕೇಂದ್ರ’

ಸಾಗರ : ಕೈಉತ್ಪನ್ನಗಳ ಮೇಲೆ ವಿಧಿಸಿದ್ದ ಬರ್ಬರವಾದ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳವುದಾಗಿ, ಶೂನ್ಯ ತೆರಿಗೆಯ ವ್ಯವಸ್ಥೆಗೆ ಇಪ್ಪತ್ತೊಂಬತ್ತು ಕೈಉತ್ಪನ್ನಗಳನ್ನು ತರುವುದಾಗಿ ನೀಡಿದ್ದ ವಚನವನ್ನು ಕೇಂದ್ರದ ಬಿಜೆಪಿ ಸರಕಾರ ಮರೆತಿದೆ ಎಂದು ಗ್ರಾಮ ಸೇವಾ ಸಂಘದ ಪ್ರಮುಖ, ದೇಸಿ ಚಿಂತಕ ಪ್ರಸನ್ನ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ರಾಮರಾಜ್ಯವನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕೇಂದ್ರದ ಹಣಕಾಸು ಸಚಿವರು ಈ ಬಗ್ಗೆ, ಜನವರಿಯಲ್ಲಿ ನೀಡಿದ್ದ ಬಹಿರಂಗ ಹೇಳಿಕೆ ಕೇವಲ ಹೇಳಿಕೆಗೆ ಸೀಮಿತವಾಗಿದೆ. […]

ಸಣ್ಣ ರೈತರಿಗೆ 10 ಸಾವಿರ ಸಹಾಯಧನ: ಬಿಎಸ್‌ವೈ

ಶಿಕಾರಿಪುರ: ರಾಜ್ಯದ ಸಣ್ಣ, ಅತಿಸಣ್ಣ ರೈತರಿಗೆ ಪ್ರತಿವರ್ಷ 10ಸಾವಿರ ರೂ. ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಿದ್ದು, ಈ ಬಾರಿ ಚುನಾವಣೆಯಲ್ಲಿ ಜನತೆ ಬಿಜೆಪಿ ಬೆಂಬಲಿಸುವಂತೆ ಕ್ಷೇತ್ರದ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ತಾಲೂಕಿನಲ್ಲಿ ಬುಧವಾರ ತಾಲೂಕಿನ 32ಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿ ಮತಯಾಚನೆ ನಡೆಸಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಘದಲ್ಲಿನ ರೈತರ ಬೆಳೆ ಸಾಲಮನ್ನಾ ಮಾಡಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಭರವಸೆ ನೀಡಿದರು. ಈ ಬಾರಿ ರಾಜ್ಯದಲ್ಲಿ […]

ಗೌಡರ ಕೋಟೆ ಭೇದಿಸಲು ರಣತಂತ್ರ

ಹಾಸನ: ‘ಹೊಳೆನರಸೀಪುರದಲ್ಲಿ ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ರಾಜ್ಯದ ಗಮನ ಸೆಳೆದಿರುವ ಹೊಳೆನರಸೀಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ವಹಿಸಿ ಕಣಕ್ಕಿಳಿಸಿರುವ ಸರ್ಕಾರಿ ನಿವೃತ್ತ ಅಧಿಕಾರಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ.ಮಂಜೇಗೌಡರಿಗೆ ಕ್ಷೇತ್ರದಲ್ಲಿ ಬಲವಾಗಿ ಬೇರು ಬಿಟ್ಟಿರುವ ಜೆಡಿಎಸ್ ಅಭ್ಯರ್ಥಿ ರೇವಣ್ಣ ದೊಡ್ಡ ಸವಾಲಾಗಿದ್ದಾರೆ. ಬಿಜೆಪಿಯಿಂದ ಹೊಸ ಮುಖ ಎಂ.ಎನ್.ರಾಜು ಕಣಕ್ಕಿಳಿದಿದ್ದಾರೆ. ಈ ವರೆಗೂ ನಡೆದಿರುವ 13 ಚುನಾವಣೆಗಳಲ್ಲಿ ದೇವೇಗೌಡರು ಆರು ಹಾಗೂ ಅವರ ಪುತ್ರ ಎಚ್.ಡಿ.ರೇವಣ್ಣ ನಾಲ್ಕು […]

ಮತದಾನ ಜಾಗೃತಿ: ಜಿಲ್ಲಾಧಿಕಾರಿ ‘ಓಟ’

ಹಾಸನ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳು ನಡೆದವು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಸರ್ಕಾರಿ, ಖಾಸಗಿ ಐ.ಟಿ.ಐ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಒಳಗೊಂಡಂತೆ 5000 ಕ್ಕೂ ಅಧಿಕ ಮಂದಿ […]

ತಿಮ್ಮಪ್ಪ, ಹಾಲಪ್ಪ ಮಧ್ಯೆ ಜಟಾಪಟಿ

ಸಾಗರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಹಾಗೂ ಬಿಜೆಪಿಯ ಹರತಾಳು ಹಾಲಪ್ಪ ನಡುವೆ ನೇರ ಪೈಪೋಟಿ ಇದೆ. ಕಾಗೋಡು ತಿಮ್ಮಪ್ಪ ಗೆಲ್ಲುವುದು ಕಾಗೋಡರಿಗಿಂತ ಬೇಳೂರು ಅವರಿಗೆ ಹೆಚ್ಚು ಅವಶ್ಯ. ಒಂದು ರೀತಿಯಲ್ಲಿ ನೇರ ಸ್ಪರ್ಧೆಯಲ್ಲಿ ಕೂಡ ಹರತಾಳು ಹಾಲಪ್ಪ ಇಬ್ಬರನ್ನು ಎದುರಿಸಬೇಕಾಗಿದೆ. ಸ್ವಾರಸ್ಯ ಎಂದರೆ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಕಾಗೋಡಿಗೆ ರನ್ನರ್‌ ಅಪ್‌ ಎನ್ನಿಸಿಕೊಂಡ ಬಿ.ಆರ್‌. ಜಯಂತ್‌ ಕೂಡ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಉಳಿದಂತೆ ಜೆಡಿಎಸ್‌ನ ಗಿರೀಶ್‌ ಗೌಡ, ಸ್ವರಾಜ್‌ ಇಂಡಿಯಾದ ಪರಮೇಶ್ವರ ದೂಗೂರು ಸೇರಿದಂತೆ […]

52 ಚಿನ್ನದ ಬಿಸ್ಕತ್ತು ವಶ: ಇಬ್ಬರು ಮ್ಯಾನ್‌ಮಾರ್‌ ಪ್ರಜೆಗಳು ಅರೆಸ್ಟ್

ಐಜಾಲ್‌ : ಕಸ್ಟಮ್ಸ್‌ ಅಧಿಕಾರಿಗಳು ಮಿಜೋರಾಂ ನಲ್ಲಿ ಇಬ್ಬರು ಮ್ಯಾನ್ಮಾರ್‌ ಪ್ರಜೆಗಳನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು 2.69 ಕೋಟಿ ರೂ. ಮೌಲ್ಯದ 52 ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ತೆಗೆದುಕೊಂಡರು. ಕಸ್ಟಮ್ಸ್‌ ಅಧಿಕಾರಿಗಳು ತಮಗೆ ದೊರಕಿದ ಖಚಿತ ಮಾಹಿತಿಯನ್ನು ಅನುಸರಿಸಿ ಕಸ್ಟಮ್ಸ್‌ check gateನಲ್ಲಿ ಶಂಕಿತ ಕಾರನ್ನು ತಡೆದು ನಿಲ್ಲಿಸಿ ಶೋಧಿಸಿದಾಗ ಅದರೊಳಗಿದ್ದ ಇಬ್ಬರ ವ್ಯಕ್ತಿಗಳ ಬಳಿ 8 ಕಿಲೋ ತೂಕದ 52 ಚಿನ್ನದ ಬಿಸ್ಕತ್ತುಗಳಿದ್ದುದು ಪತ್ತೆಯಾಯಿತು ಎಂದು ಕಳ್ಳಸಾಗಣೆ ನಿಗ್ರಹ ದಳದ SP ತಿಳಿಸಿದರು. […]

4 ಲವರ್‌ಗಳ ನೆರವಿನಲ್ಲಿ ಪತಿಯ ಕೊಂದು 3 ತುಂಡು ಮಾಡಿದ ಗೋವಾ ಮಹಿಳೆ

ಮಾರ್ಗೋವಾ/ಕ್ವೆಪೆ : ಕರ್ನಾಟಕದ ಬೈಲಹೊಂಗಲದ 38ರ ಹರೆಯದ ತನ್ನ ಪತಿ ಬಸವರಾಜ್‌ ಬಾರಿಕಿ ಎಂಬಾತನನ್ನು ಸ್ಕೆಚ್‌ ಹಾಕಿ ಕುಚೋರಿಂ ನಲ್ಲಿ ಫ್ಲಾಟ್‌ ಒಂದರಲ್ಲಿ ಕೊಲೆಗೈದ ಆರೋಪದ ಮೇಲೆ 30ರ ಹರೆಯದ ಕಲ್ಪನಾ ಬಾರಿಕಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಕೊಂದ ಬಳಿಕ ಆತನ ಮೃತ ದೇಹವನ್ನು ಪತ್ನಿ ಕಲ್ಪನಾ ತನ್ನ ನಾಲ್ವರು ಲವ್ವರ್‌ ಗಳ ನೆರವಿನಲ್ಲಿ ಮೂರು ತುಂಡು ಮಾಡಿ ಗೋಣಿ ಚೀಲದಲ್ಲಿ ಅವುಗಳನ್ನು ತುಂಬಿ ಗೋವಾ-ಕರ್ನಾಟಕ ಗಡಿಯಲ್ಲಿನ ಅನ್‌ಮೋಡ್‌ ಘಾಟ್‌ ಪ್ರದೇಶದ ಮೂರು ವಿಭಿನ್ನ […]

ತಾಕತ್ತಿದ್ದರೆ ಸಂವಿಧಾನ ಮುಟ್ಟಿ ನೋಡಿ: ಬಿಜೆಪಿಗೆ ರಾಹುಲ್‌ ಗಾಂಧಿ ಸವಾಲು

ಬೆಂಗಳೂರು: ‘ಸಂವಿಧಾನ ಬದಲಿಸುವ ಮಾತಿರಲಿ, ತಾಕತ್ತಿದ್ದರೆ ಸಂವಿಧಾನ ಮುಟ್ಟಿ ನೋಡಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿಗೆ ಸವಾಲು ಹಾಕಿದರು. ‘ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಿಸುವುದಾಗಿ ಹೇಳಿದ್ದಾರೆ. ಅದನ್ನು ಕೇಳಿಯೂ ನರೇಂದ್ರ ಮೋದಿ ಸುಮ್ಮನಿದ್ದಾರೆ. ಆರ್‍ಎಸ್‍ಎಸ್, ಬಿಜೆಪಿ, ಮೋದಿ… ಯಾರೇ ಬಂದರೂ ಸಂವಿಧಾನ ಮುಟ್ಟಲು ಬಿಡುವುದಿಲ್ಲ. ಇಷ್ಟು ಹೇಳಿದ ಮೇಲೂ ಬದಲಾಗದಿದ್ದರೆ, ಒಮ್ಮೆ ಮುಟ್ಟಿ ನೋಡಿ. ಮುಂದೆ ಏನು ಮಾಡುತ್ತೇವೆ ಗೊತ್ತಾಗುತ್ತದೆ’ ಎಂದು ಗುಡುಗಿದರು. ಶಿವಾಜಿನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಈ […]