ಕಡಿಮೆ ದರದಲ್ಲಿ ಬಡವರಿಗೆ ಔಷಧ ವಿತರಣೆ

ಶಿವಮೊಗ್ಗ: ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿರುವುದು ಕೇಂದ್ರ ಸರ್ಕಾರದ ಸಾಧನೆಗಳಲ್ಲೊಂದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಜೆನರಿಕ್ ಔಷಧ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ಬಳಿಕ ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜೆನರಿಕ್ ಔಷಧ ಮಳಿಗೆಗಳಲ್ಲಿ ಕೆಲ ಔಷಧಗಳು ಶೇ.85ಕ್ಕೂ ಕಡಿಮೆ ದರದಲ್ಲಿ ದೊರೆಯುತ್ತಿವೆ. ಇದರಿಂದ ಜನರ ಆರೋಗ್ಯ ಸುಧಾರಣೆಗೆ ಒತ್ತು ನೀಡಿದಂತಾಗಿದೆ ಎಂದರು. […]

ಮತ್ತೆ ಮಧು ಬಂಗಾರಪ್ಪ ‘ಹರಕೆಯ ಕುರಿ’?

ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜೆಡಿಎಸ್ ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್‌ ತನ್ನ ಮೊದಲ ಅಭ್ಯರ್ಥಿಯನ್ನು ಪ್ರಕಟಿಸಿದೆ. ಉಪಚುನಾವಣೆಯಲ್ಲಿ ಸೋತಿದ್ದ ಮಧು ಬಂಗಾರಪ್ಪ ಅವರು ಮತ್ತೊಮ್ಮೆ ಶಿವಮೊಗ್ಗದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಶಿವಮೊಗ್ಗ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರೇ ಜೆಡಿಎಸ್‌ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಘೋಷಿಸಿದ್ದಾರೆ. ನಿನ್ನೆ ಸದಾಶಿವನಗರದಲ್ಲಿ ಮಧು ಬಂಗಾರಪ್ಪ ಅವರ ಮನೆಗೆ ತೆರಳಿ ಚರ್ಚಿಸಿದ್ದರು. ಚರ್ಚೆಯ ನಂತರ ಮಾತನಾಡಿದ ದೇವೇಗೌಡ, ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು […]

ರಾಜ್ಯದಿಂದ 22 ಬಿಜೆಪಿ ಸಂಸದರನ್ನು ಆರಿಸಿ ಕಳುಹಿಸುವ ತನಕ ವಿರಮಿಸಲ್ಲ: ಬಿಎಸ್‌ವೈ

ರಾಜ್ಯದಲ್ಲಿ 22 ಸೀಟನ್ನು ಬಿಜೆಪಿ ಗೆದ್ದರೆ ಸಮ್ಮಿಶ್ರ ಸರಕಾರ ಉಳಿಯಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು. ಮೋದಿ ಅವರ ಸಾಧನೆ, ಜನಪರ ಕೆಲಸಗಳನ್ನು ಮನೆಮನೆಗೆ ಮುಟ್ಟಿಸಿ, ಬೇರೆ ಪಕ್ಷದವರನ್ನು ಕರೆತನ್ನಿ, ಬೇರೆಯವರು ಬಂದರೆ ನಿಮ್ಮ ಕುರ್ಚಿ ಹೋಗುತ್ತದೆ ಎಂಬ ಭಯ ಬೇಡ ಎಂದು ಯಡಿಯೂರಪ್ಪ ಕಾರ್ಯರ್ತರಿಗೆ ಕರೆ ನೀಡಿದರು. ವಿಜಯಪುರ: ಚುನಾವಣೆ ಮುಗಿಯುವ ತನಕ ಮನೆ ಸೇರಲ್ಲ ರಾಜ್ಯದಿಂದ ಕನಿಷ್ಠ 22 ಸಂಸದರನ್ನು ಆರಿಸಿ ಕಳುಹಿಸುವ ತನಕ ವಿರಮಿಸುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದರು. ವಿಜಯಪುರದಲ್ಲಿ […]

ಸುಪ್ರೀಂ ಕೋರ್ಟ್‌ ಆದೇಶದಂತೆ ನಾಳೆಯೇ ಬಹುಮತ ಸಾಬೀತುಪಡಿಸುತ್ತೇವೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ಸುಪ್ರೀಂ ಕೋರ್ಟ್‌ನ ಆದೇಶದಂತೆ ನಾಳೆ ಬಹುಮತ ಸಾಬೀತುಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ‘ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂದು ಕೋರಿ ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶುಕ್ರವಾರ ಬೆಳಿಗ್ಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ನಾಳೆ(ಶನಿವಾರ) ಸಂಜೆ 4ಕ್ಕೆ ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಿತು. ಸುಪ್ರೀಂ ಕೋರ್ಟ್ ಆದೇಶ ಹೊರ ಬಿದ್ದ ಕೆಲ ಸಮಯದಲ್ಲೇ ಸುದ್ದಿಗಾರರೊಟ್ಟಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲನೆ ಮಾಡುತ್ತೇವೆ. ನಾಳೆಯೇ ವಿಶ್ವಾಸ ಮತ ಸಾಬೀತುಪಡಿಸುತ್ತೇವೆ […]

ನಾಳೆ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಿ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ‘ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂದು ಕೋರಿ ಕಾಂಗ್ರೆಸ್–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ನಾಳೆ(ಶನಿವಾರ) ಸಂಜೆ 4ಕ್ಕೆ ವಿಶ್ವಾಸಮತ ಸಾಬೀತುಪಡಿಸುವಂತೆ ಆದೇಶಿಸಿತು. ಶುಕ್ರವಾರ ಅರ್ಜಿಯ ಮುಂದುವರಿದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‌.ಎ. ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿತು. ವಿಚಾರಣೆ ವೇಳೆ ಪೀಠ, ‘ನಾಳೆಯೇ (ಶನಿವಾರ) ವಿಶ್ವಾಸಮತ ಯಾಚನೆಗೆ ಸೂಚಿಸಬೇಕೆ? ಅಥವಾ ರಾಜ್ಯಪಾಲರ ನಿರ್ಧಾರವನ್ನು […]

ಇನ್ನೂ ಐದು ಬಾರಿ ಮತ ಚಲಾಯಿಸಲು ಸಿದ್ಧರಾಗಿ

ಶಿವಮೊಗ್ಗ: ಮಾನ್ಯ ಮತದಾರ ಬಾಂಧವರೆ, ವಿಧಾನಸಭೆ ಚುನಾವಣೆ ಮುಗಿಯಿತು, ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಿ ಮುಗಿಸಿದ್ದೇವೆ ಎಂದು ನೀವು ‘ನಿರಾಳ’ರಾಗುವಂತಿಲ್ಲ. ಮುಂದಿನ ಹನ್ನೆರಡು ತಿಂಗಳ ಅವಧಿಯಲ್ಲಿ ಇನ್ನೂ ನಾಲ್ಕೈದು ಬಾರಿ ನೀವು ‘ಪವಿತ್ರ’ ಮತ ಚಲಾಯಿಸಬೇಕಿದೆ. ಅದಕ್ಕೆ ನೀವು ಸಿದ್ದರಾಗಬೇಕಿದೆ. ಹೇಳಿಕೇಳಿ ಇದು ಚುನಾವಣೆ ಪರ್ವಕಾಲ. ವಿಧಾನಸಭೆ ಚುನಾವಣೆ ಅರ್ಭಟ ತಣ್ಣಗಾಗುವಷ್ಟರಲ್ಲಿ ವಿಧಾನಪರಿಷತ್‌ನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಅಧಿಸೂಚನೆ ಹೊರಬಿದ್ದಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಹಾಲಿ ವಿಧಾನಪರಿಷತ್‌ ಸಭಾಪತಿಯೂ ಆಗಿರುವ […]

ಜಿಲ್ಲೆಯಲ್ಲಿ ರೈತರಿಗೆ ಸಿಹಿ ನೀಡದ ಮಾವು

ಶಿವಮೊಗ್ಗ: ಮಳೆ ಅಭಾವ, ಅಕಾಲಿಕ ಮಳೆ, ಭಾರಿ ಗಾಳಿಯಿಂದಾಗಿ ಮಾವು ಬೆಳೆಗೆ ಪೆಟ್ಟು ಬಿದ್ದಿರುವುದರಿಂದ ಒಟ್ಟಾರೆ ಇಳುವರಿ ಮೇಲೆ ಪರಿಣಾಮ ಬೀರಿದ್ದು, ರೈತರ ಪಾಲಿಗೆ ಈ ಬಾರಿ ಮಾವು ಬೆಳೆ ಸಿಹಿ ತಂದಿಲ್ಲ. 2ವರ್ಷಗಳ ಹಿಂದೆ ಉತ್ತಮ ಫಸಲು ಪಡೆದು ಆರ್ಥಿಕ ಬಲದತ್ತ ಮುಖ ಮಾಡಿದ್ದ ರೈತರ ಸಮೂಹವೀಗ ಮಾವಿನ ಇಳುವರಿ ವೈಫಲ್ಯದಿಂದಾಗಿ ಕಂಗಾಲಾಗಿದ್ದಾರೆ. ಪ್ರಸ್ತುತ ಜಿಲ್ಲೆಯ 3,359 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಹಣ್ಣನ್ನು ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 40 ಸಾವಿರದಿಂದ 44ಸಾವಿರ ಕ್ವಿಂಟಲ್‌ ಇಳುವರಿ ಇದೆ. […]

ಕಮಲ ಅರಳಿಸಿದ ‘ಪೇಜ್ ಪ್ರಮುಖ್’

ಸಾಗರ : ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವ ಮಾತಿನಂತೆ ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದು ದಿನ ಕಳೆದರೂ ಸೋಲು ಗೆಲುವಿಗೆ ಕಾರಣವಾದ ಅಂಶಗಳ ಬಗ್ಗೆ ಜನರಲ್ಲಿ ಚರ್ಚೆ ನಡೆಯುತ್ತಲೇ ಇದೆ. ಬಿಜೆಪಿ ನಡೆಸಿರುವ ತಂತ್ರಗಾರಿಕೆಯಲ್ಲಿ ‘ಪೇಜ್ ಪ್ರಮುಖ್ ’ ಈಗ ಹೆಚ್ಚು ಚರ್ಚೆಯಾಗುತ್ತಿದೆ. ಏನಿದು ‘ಪೇಜ್ ಪ್ರಮುಖ್’ ?: ಮತದಾರರ ಪಟ್ಟಿಯ ಒಂದು ಪುಟದಲ್ಲಿ ಸಾಮಾನ್ಯವಾಗಿ 30ರಿಂದ 35 ಮತದಾರರಿರುತ್ತಾರೆ. ಈ ಮತದಾರರ ಪೈಕಿ ತಮಗೆ ಹೆಚ್ಚು ವಿಶ್ವಾಸಿಗರಾದ ಒಬ್ಬರನ್ನು ಗುರುತಿಸಿ […]

ಬಿಜೆಪಿಗೆ ಲಾಭ ತಂದ ಮುಖ್ಯಮಂತ್ರಿ ಘೋಷಣೆ

ಶಿವಮೊಗ್ಗ: ಬಿಜೆಪಿ ವರಿಷ್ಠರು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಪಕ್ಷ ಅತಿ ಹೆಚ್ಚು ಮತ ಗಳಿಸುವ ಸೂಚನೆ ದೊರಕಿತ್ತು. ಆ ನಿರೀಕ್ಷೆ ನಿಜವಾಗಿದೆ. ಜಿಲ್ಲೆಯವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂಬ ಜನರ ಒಲವು ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಇಂತಹ ಅವಕಾಶ ಒದಗಿಸಿದೆ. ಚಲಾವಣೆಯಾದ 11,13,309 ಮತಗಳಲ್ಲಿ ಬಿಜೆಪಿ 4,87,403 ಮತಗಳನ್ನು ಪಡೆದಿದೆ. ಅಂದರೆ, ಆ ಪಕ್ಷ ಜಿಲ್ಲೆಯಲ್ಲಿ ಪಡೆದ ಸರಾಸರಿ ಶೇಕಡವಾರು ಮತ ಶೇ 43.77 ರಾಜ್ಯದ ವಿಧಾನಸಭೆಗೆ 2008ರಲ್ಲಿ […]

ಪಕ್ಷ ಕಟ್ಟುವ ಕೆಲಸ ಮಾಡುವೆ’

ತೀರ್ಥಹಳ್ಳಿ: ಜನರು ನೀಡಿದ ತೀರ್ಪನ್ನು ಗೌರವದಿಂದ ಸ್ವೀಕರಿಸಿ ತಲೆಬಾಗುತ್ತೇನೆ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ’ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಹೇಳಿದರು. ಬುಧವಾರ ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸ ಆಗಬೇಕು. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು. ದೇವೇಗೌಡ, ಕುಮಾರಸ್ವಾಮಿ ನನ್ನ ಮೇಲೆ ಬಹಳ ವಿಶ್ವಾಸ ಇಟ್ಟಿದ್ದರು. ಅದನ್ನು ಉಳಿಸಿಕೊಳ್ಳಬೇಕು. ಮತದಾರರ ವಿಶ್ವಾಸ ಗಳಿಸಲು ತೀರ್ಥಹಳ್ಳಿಯಲ್ಲಿಯೇ ಇರಬೇಕೆಂದು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು. ‘ಆರಗ ಜ್ಞಾನೇಂದ್ರ ಅವರಿಗೆ ಅಭಿನಂದನೆ […]