ಕ್ಷೇತ್ರದ ಆರ್ಥಿಕ ಸದೃಢತೆಗೆ ಆದ್ಯತೆ’

ಸರ್ಕಾರಿ ಸೇವೆ ತೊರೆದು ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣ? ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಒಡನಾಡಿಯಾದ ಕಾರಣ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಯಿತು. 20 ವರ್ಷಗಳಿಂದ ಕ್ಷೇತ್ರದ ಜನರ ಜತೆ ಒಡನಾಟ ಹೊಂದಿದ್ದೆ. ಜನರೇ ಅಪೇಕ್ಷೆ ಪಟ್ಟ ಕಾರಣ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದೇನೆ. ಯಾವ ವಿಷಯದ ಆಧಾರದ ಮೇಲೆ ಚುನಾವಣೆಯಲ್ಲಿ ಮತಯಾಚಿಸುತ್ತೀರಾ? ತಾಲ್ಲೂಕಿನ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾದ ನೀರಾವರಿ ಯೋಜನೆ […]

ಸಿದ್ದರಾಮಯ್ಯ ಯೋಜನೆಗಳು ಗೆಲುವಿಗೆ ವರದಾನ

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರಂತಹ ಪ್ರಬಲ ನಾಯಕರ ವಿರುದ್ಧ ಸ್ಪರ್ಧೆ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯ ? ಸಾಮಾನ್ಯ ಕಾರ್ಯಕರ್ತ ಹಾಗೂ ರೈತನ ಮಗನಾದ ನನ್ನನ್ನು ಕಾಂಗ್ರೆಸ್‌ ಗುರುತಿಸಿ ಟಿಕೆಟ್‌ ನೀಡಿದ್ದು, ಸಂತಸ ತಂದಿದೆ. ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಘನತೆ ಕಾಪಾಡುವ ಕಾರ್ಯ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಬಲ ನಾಯಕರ ವಿರುದ್ಧ ಸಾಮಾನ್ಯ ಪ್ರಜೆ ಸ್ಪರ್ಧೆ ನಡೆಸಲು ಅವಕಾಶವಿದೆ. ಯಾವ ವಿಷಯದ ಆಧಾರದ ಮೇಲೆ ಚುನಾವಣೆಯಲ್ಲಿ ಮತಯಾಚಿಸುತ್ತೀರಿ? ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರೂ ತಾಲ್ಲೂಕಿನ ರೈತರಿಗೆ […]

ಜಿಲ್ಲಾ ಬಿಜೆಪಿಯಿಂದ ‘ನಮ್ಮ ಸಂಕಲ್ಪ’ ಪ್ರಣಾಳಿಕೆ

ಶಿವಮೊಗ್ಗ : ಕರಾವಳಿ ಸಂಪರ್ಕಿಸುವ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ, ಎರಡು ಸಂಯೋಜಿತ ಸಕ್ಕರೆ ಕಾರ್ಖಾನೆಗಳ ಸ್ಥಾಪನೆ, ವಿಐಎಸ್‌ಎಲ್‌, ಎಂಪಿಂ ಆಧುನೀಕರಣ, ವಿಜ್ಞಾನ ಕೇಂದ್ರ, ಭತ್ತದ ತಳಿ ಸಂಶೋಧನಾ ಕೇಂದ್ರ, ಕೋಲ್ಡ್‌ ಸ್ಟೋರೇಜ್‌, ರೈಲ್ವೆ ಗೂಡ್ಸ್‌ ಕಾರಿಡಾರ್‌ ಸ್ಥಾಪನೆ ಒಳಗೊಂಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ‘ನಮ್ಮ ಸಂಕಲ್ಪ’ ಚುನಾವಣೆ ಪ್ರಣಾಳಿಕೆಯನ್ನು ಜಿಲ್ಲಾ ಬಿಜೆಪಿಯು ಬಿಡುಗಡೆಗೊಳಿಸಿತು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಪಕ್ಷದ ಮುಖಂಡರು ಸಮಗ್ರ ಜಿಲ್ಲೆಗೆ ಅಲ್ಲದೆ ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಜಿಲ್ಲೆಗೆ […]

ಬಿಜೆಪಿ ವಿರುದ್ಧ ಹರಿಹಾಯ್ದ ತೀ.ನಾ.ಶ್ರೀನಿವಾಸ್‌

ಶಿವಮೊಗ್ಗ : ಮಾತ್ತೇತ್ತಿದರೆ ಗೋ ಪ್ರೇಮ ಎನ್ನುವ ಮೋದಿ ಸರಕಾರಕ್ಕೆ ತಾಕತ್ತಿದ್ದರೆ ಗೋ ಮಾಂಸ ರಫ್ತು ನಿಷೇಧ ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೇ ಗೋ ಮಾಂಸ ಹೆಚ್ಚು ರಫ್ತಾಗುತ್ತಿದೆ. ಆದರೆ, ಬಿಜೆಪಿ ನಾಯಕರು ಮಾತ್ರ ಮಾತ್ತೇತ್ತಿದರೆ ಗೋ ಪ್ರೇಮ, ಗೋ ಪ್ರೇಮ ಎನ್ನುತ್ತಾರೆ ಎಂದು ಹರಿಹಾಯ್ದರು. ಕಪ್ಪು ಹಣ ಹೊರತರುತ್ತೇನೆ ಎಂದು ಹೇಳಿ, ನೋಟ್‌ ಬ್ಯಾನ್‌ ಮೂಲಕ ಸಾಮಾನ್ಯ […]

ಬೇಳೂರಿಗೆ ಮತದಾರರ ತರಾಟೆ

ಹೊಸನಗರ: ಸಾಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಮತಯಾಚನೆ ವೇಳೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಸ್ಥಳೀಯ ಮತದಾರರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲಮಯ ಪರಿಸ್ಥಿತಿ ನಿರ್ಮಾಣವಾದ ಘಟನೆ ಪಟ್ಟಣಕ್ಕೆ ಸಮೀಪ ಮಾವಿನಕೊಪ್ಪದಲ್ಲಿ ಶನಿವಾರ ರಾತ್ರಿ ನಡೆಯಿತು. ಕಾಗೋಡು ತಿಮ್ಮಪ್ಪ ಪರ ಮತಯಾಚಿಸಲು ಗೋಪಾಲಕೃಷ್ಣ ಮುಂದಾದ ವೇಳೆ ಸ್ಥಳೀಯ ಮತದಾರನೊಬ್ಬ ಎದ್ದುನಿಂತು, ‘ಕಳೆದ 30ವರ್ಷಗಳಿಂದ ನೀವಿಬ್ಬರೇ ಅಧಿಕಾರ ಅನುಭವಿಸಿದ್ದೀರಿ. ಈ ವೇಳೆ ಎಷ್ಟು ಹಕ್ಕುಪತ್ರ ನೀಡಿದ್ದೀರಿ. ಈಗ ಮತದಾರರಿಗೆ ಹಕ್ಕುಪತ್ರ ವಿತರಿಸುವ […]

ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಯೋಜನೆ

ಹೊಸನಗರ: ಹಲವು ವರಗಳಿಂದ ನನೆಗುದಿಗೆ ಬಿದ್ದಿರುವ ಈ ಭಾಗದ ಮುಳುಗಡೆ ಸಂತ್ರಸ್ಥರ ಸಮಸ್ಯೆ ನಿವಾರಣೆ ಮಾಡುವುದು ಜೆಡಿಎಸ್‌ ಪಕ್ಷದ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ತಾಲೂಕಿನ ಬಿದನೂರು ನಗರದಲ್ಲಿ ನಡೆದ ಜೆಡಿಎಸ್‌ ಅಭ್ಯರ್ಥಿ ಆರ್‌.ಎಂ. ಮಂಜುನಾಥಗೌಡ ಪರ ಮತ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೈಗೊಂಡ 4 ಜಲವಿದ್ಯುತ್‌ ಯೋಜನೆಯಿಂದಾಗಿ ಭೂಮಿ ಕಳೆದುಕೊಂಡ ರೈತರು ಇನ್ನೂ ನರಕ ಸದೃಶ ಜೀವನ ನಡೆಸುತ್ತಿದ್ದಾರೆ. ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಉದ್ಯೋಗ, ಪರಿಹಾರ ಸಿಕ್ಕಿಲ್ಲ. […]

ಯುವಕರಿಗೆ ಆದ್ಯತೆ ನೀಡದ ಪಕ್ಷಗಳು

ಶಿಕಾರಿಪುರ: ‘ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ’ ಎಂದು ಬೆಂಗಳೂರು ಹೈಕೋರ್ಟ್‌ ವಕೀಲ ಅನಂತನಾಯ್ಕ ಟೀಕಿಸಿದರು. ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಶನಿವಾರ ಪಕ್ಷೇತರ ಅಭ್ಯರ್ಥಿ ವಿನಯ್‌ ಕೆ.ಸಿ. ರಾಜಾವತ್‌ ಪರ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ದೊರೆಯಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಕ್ಕಳು ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡ ಮಕ್ಕಳು ಮೊಮ್ಮಕ್ಕಳು ರಾತ್ರೊ ರಾತ್ರಿ ರಾಜಕೀಯ ನಾಯಕರಾಗುತ್ತಾರೆ. ಆದರೆ ಪೊಲೀಸ್‌ […]

ಸಿಎಂ ಸ್ಥಾನಕ್ಕೆ ತಕ್ಕ ಮಾತನಾಡಲಿ: ಅಪ್ಪಾಜಿ

ಭದ್ರಾವತಿ: ಕಾಂಗ್ರೆಸ್‌ ಅಭ್ಯರ್ಥಿ ಪರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ನಗರಕ್ಕಾಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯ ದಾಖಲಾತಿ ಪ್ರಕಾರ ಮಾತನಾಡದೆ ಮತದಾರರನ್ನು ದಿಕ್ಕು ತಪ್ಪಿಸಲು ಸುಳ್ಳಿನ ಹೇಳಿಕೆ ನೀಡಿದ್ದು, ಅಪಪ್ರಚಾರ ಮಾಡಿದ್ದಾರೆ. ಇದಕ್ಕೆ ಕಿವಿಗೊಡಬಾರದೆಂದು ಶಾಸಕ ಹಾಗೂ ಜೆಡಿಎಸ್‌ ಅಭ್ಯರ್ಥಿ ಎಂ.ಜೆ.ಅಪ್ಪಾಜಿ ಮಾಧ್ಯಮಗಳಿಗೆ ಭಾನುವಾರ ದಾಖಲೆ ವಿತರಿಸಿ ಸ್ಪಷ್ಟನೆ ನೀಡಿದರು. ಸಂಗಮೇಶ್ವರ್‌ ಪರ ಮತಯಾಚನೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ಸ್ಥಳೀಯ ಶಾಸಕ ಅಪ್ಪಾಜಿ ತಾನು ಕಾರ್ಮಿಕನಾಗಿದ್ದೆ ಎಂಬುದನ್ನು ಮರೆತು ಎಂಪಿಎಂ ಮತ್ತು ವಿಐಎಸ್‌ಎಲ್‌ ಕಾರ್ಖಾನೆ […]

ಸಿಎಂ ಆಗೋದು ಮತದಾರರ ನಿರ್ಧಾರ : ಎಚ್‌ಡಿಕೆ

ಹೊಸನಗರ: ಜೆಡಿಎಸ್‌ ಈ ಬಾರಿ ಅಧಿಕಾರಕ್ಕೆ ಬಂದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಲಾಗುವುದು. ಅಲ್ಲದೇ ಮುಂದೆ 5ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಬಿದನೂರು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಮೀಕ್ಷೆ ಮೀರಿ ಈ ಬಾರಿ ಜೆಡಿಎಸ್‌ 113 ಸ್ಥಾನ ಗಳಿಸಲಿದೆ. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ದಿನಾಂಕ ಸಮಯವನ್ನೂ ನಿಗದಿಸಿದ್ದಾರೆ. […]

ಸಂವಿಧಾನದಂತೆ ಆಡಳಿತ: ಗುಲಾಂ ನಬಿ ಆಜಾದ್‌

ಶಿವಮೊಗ್ಗ: ಧರ್ಮಗಳು ಆಚರಣೆಗೆ ಸೀಮಿತವಾಗಬೇಕೆ ಹೊರತು ರಾಜಕೀಯವಾಗಬಾರದು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ನಗರದ ಎನ್‌ಟಿ ರಸ್ತೆಯಲ್ಲಿ ಭಾನುವಾರ ಸಂಜೆ ಜಿಲ್ಲಾ ಕಾಂಗ್ರೆಸ್‌ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ಹೆಸರು ಹೇಳದೆ ಎದುರಾಳಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಭಾರತವು ಹಲವು ಧರ್ಮಗಳನ್ನು ಒಳಗೊಂಡ ವಿಶಿಷ್ಟÜ ದೇಶ. ಎಲ್ಲ ಧರ್ಮಗಳ ಜನರು ಏಕತೆಯಿಂದ ಬಾಳುತ್ತಿದ್ದಾರೆ. ಧರ್ಮಗಳು ಕೇವಲ ನಮ್ಮ ಆಚರಣೆಗಳಾಗಬೇಕು. […]