ಯಡಿಯೂರಪ್ಪ, ನಾನು ರಾಮ–ಲಕ್ಷ್ಮಣರು; ಹುಸಿಯಾಗಲಿದೆ ಚುನಾವಣಾ ಪೂರ್ವ ಸಮೀಕ್ಷೆ – ಈಶ್ವರಪ್ಪ

ಶಿವಮೊಗ್ಗ: ‘ಸಿ ಫೋರ್’ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯನ್ನು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹುಸಿಗೊಳಿಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ನಡೆದಿದ್ದ ಸಮೀಕ್ಷೆಯಲ್ಲಿ ಬಿಜೆಪಿ 174 ಸ್ಥಾನ ಮಾತ್ರ ಗಳಿಸುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಲ್ಲಿ ಪಕ್ಷ ಗಳಿಸಿದ್ದು 324 ಸ್ಥಾನ. ರಾಜ್ಯದಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾಗಲಿದೆ. ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರ ಗದ್ದುಗೆ ಏರಲಿದೆ. ಯಡಿಯೂರಪ್ಪ ಮತ್ತೆ ಈ […]

ಸಚಿವ ಮಂಜು ಕಚೇರಿಯಲ್ಲಿ ಬೀಗ ಹಾಕಿಕೊಂಡು ಹಳೇ ಕಡತ ವಿಲೇವಾರಿ?

ಹಾಸನ: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಳೇ ಕಡತಗಳಿಗೆ ಚಾಲನೆ ನೀಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಸ್ಥಳಕ್ಕೆ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ಆಗಮಿಸಿದ್ದಾರೆ. ಸಚಿವರ ಕಚೇರಿಯಲ್ಲಿ ಮೂವರು ಯುವತಿಯರು ಬೀಗ ಹಾಕಿಕೊಂಡು ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಕಡತ ವಿಲೇವಾರಿಗೆ ಸಂಬಂಧಪಟ್ಟಂತೆ ಕಚೇರಿಯಲ್ಲೇ ಗುಪ್ತವಾಗಿ ಕೆಲಸ ಮಾಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಧಿಕಾರಿಗಳು ಆಗಮಿಸಿದ್ದರು. ಕಚೇರಿಯ ಬೀಗ ತೆಗೆಯಲು ಹೇಳಿದ್ದರೂ ಐಬಿ ಸಿಬ್ಬಂದಿ ಹಿಂದೇಟು ಹಾಕಿದ್ದರು. ನಂತರ ಚುನಾವಣಾ […]

ಸಿಗಂದೂರು ಸೇತುವೆ ನಿರ್ಮಾಣ ನಾಟಕವೇ?

ಸಾಗರ: ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಅಂಬಾರಗೋಡ್ಲು–ಕಳಸವಳ್ಳಿ ನಡುವೆ ₹ 600 ಕೋಟಿ ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಕಳೆದ ಫೆ.19ರಂದು ಕೇಂದ್ರ ಸರ್ಕಾರದ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದರಿಂದಾಗಿ ಹಲವು ದಶಕಗಳ ಸೇತುವೆ ಕಾಮಗಾರಿ ಕನಸು ನನಸಾಗುವ ಭರವಸೆ ತಾಲ್ಲೂಕಿನ ಜನರಲ್ಲಿ ಮೂಡಿತ್ತು. ಆದರೆ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಸೇತುವೆ ಶಂಕುಸ್ಥಾಪನೆ ಸಮಾರಂಭ ರಾಜಕೀಯ ಗಿಮಿಕ್‌ ಇರಬಹುದೇ ಎನ್ನುವ ಅನುಮಾನ ಕಾಡುತ್ತಿದೆ. 2009ನೇ ಸಾಲಿನಲ್ಲೇ ರಾಜ್ಯ ಸರ್ಕಾರ ಮೊದಲ ಬಾರಿಗೆ ಸೇತುವೆ […]

‘ಅಮಿತ್ ಶಾ ಭೇಟಿಯಿಂದ ರೈತರಿಗೆ ನಿರಾಸೆ’

ಶಿರಾಳಕೊಪ್ಪ: ‘ಅಮಿತ್ ಶಾ ರೈತರಿಗೆ ಕೈಕೊಟ್ಟು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಕೈ ಹಿಡಿದು ಎತ್ತಿ, ಹೋಗಿದ್ದಾರೆ, ಇದರಿಂದ ಜಿಲ್ಲೆಯ ರೈತ ಸಮುದಾಯಕ್ಕೆ ಏನೂ ಪ್ರಯೋಜನವಾಗಿಲ್ಲ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು. ಏಪ್ರಿಲ್ 5ರಂದು ಶಿಕಾರಿಪುರದಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ವಿಕಾಸ ಪರ್ವ ಬಹಿರಂಗ ಸಭೆಯ ಪೂರ್ವಭಾವಿ ಸಮಾಲೋಚನ ಸಭೆ ಉದ್ದೇಶಿಸಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಅವರು ಮಾತನಾಡಿದರು. ದೇಶದಾದ್ಯಂತ ರೈತರ ಆತ್ಮಹತ್ಯೆ ಆಗಿಲ್ಲ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದು, ಕರ್ನಾಟಕದಲ್ಲಿ […]

ಅಡಿಕೆ ಬೆಳೆಗಾರರ ಹೆಸರಲ್ಲಿ ಸುಳ್ಳು ಸಮಾವೇಶ: ಆರೋಪ

ಶಿವಮೊಗ್ಗ: ಅಡಿಕೆ ಬೆಳೆಗಾರರ ಹೆಸರಿನಲ್ಲಿ ಬಿಜೆಪಿ ತೀರ್ಥಹಳ್ಳಿಯಲ್ಲಿ ಸುಳ್ಳು ಸಮಾವೇಶ ನಡೆಸಿ, ರೈತರನ್ನು ವಂಚಿಸಿದೆ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು. ಅವರದೇ ಪಕ್ಷದ ಕೇಂದ್ರ ಸಚಿವರು ಅಡಿಕೆ ಹಾನಿಕರ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾನಿಕರ ಅಲ್ಲ ಎನ್ನುತ್ತಾರೆ. ಸ್ವಾರ್ಥಕ್ಕಾಗಿ ರೈತರ ಹೆಸರು ಬಳಕೆ ಮಾಡಿಕೊಳ್ಳುವ ರಾಷ್ಟ್ರೀಯ ಪಕ್ಷಗಳು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ದ್ರೋಹ ಎಸಗಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು. ಶಿಕಾರಿಪುರಕ್ಕೆ ಕುಮಾರಸ್ವಾಮಿ: ‘ಏಪ್ರಿಲ್‌ 5ರಂದು ಜೆಡಿಎಸ್ […]

ರಾಣಿಬೆನ್ನೂರಿನಿಂದ ಸ್ಪರ್ಧಿಸಲ್ಲ: ಬಿವೈಆರ್‌

ಶಿವಮೊಗ್ಗ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಾವು ರಾಣಿಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕಾರಿಪುರ ಕ್ಷೇತ್ರ ತಮಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಶಿವಮೊಗ್ಗ ಜಿಲ್ಲೆ ಅಥವಾ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುವೆ. ಇದನ್ನು ಹೊರತುಪಡಿಸಿ,ಹೊರಗಿನ ಜಿಲ್ಲೆಯ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವ ಇಚ್ಛೆ ಹೊಂದಿಲ್ಲ ಎಂದರು.