ಆನೆ ಬಿಡಾರದ ‘ಒಡನಾಡಿ’ಗಳಿಂದಲೇ ಜಿಂಕೆ ಬೇಟೆ !

ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರದ ಕ್ರಾಲ್‌ ಬಳಿಯೇ ಕೋವಿ ಸದ್ದು ಮೊಳಗುತ್ತಿದ್ದು,ಅರಣ್ಯ ಇಲಾಖೆಯ ‘ಒಡನಾಡಿ’ಗಳಿಂದಲೇ ಜಿಂಕೆ, ಕಡವæಗಳ ಬೇಟೆ ಎಗ್ಗಿಲ್ಲದೇ ಸಾಗಿದೆ. ನಿತ್ಯವೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕೆಳ ಹಂತದ ಅಧಿಕಾರಿಗಳ ಜತೆ ‘ಬಾಂಧವ್ಯ’ ಹೊಂದಿದ ಇಲಾಖೆಯ ಚಲನವಲನವನ್ನು ಖರಾರುವಕ್ಕಾಗಿ ಬಲ್ಲ ಸಕ್ರೆಬೈಲು ಸುತ್ತಮುತ್ತಲಿನ ಕೆಲವು ಹಳ್ಳಿಗಳ ಪ್ರಾಣಿ ಹಂತಕರ ತಂಡ ವನ್ಯಜೀವಿ ಬೇಟೆಯಲ್ಲಿ ನಿರತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಕಾರಣಗಳಿಂದಾಗಿ ಅರಣ್ಯ ಒಂದಷ್ಟು ವೃದ್ಧಿಯಾಗಿದೆ. ಅಲ್ಲದೇ ವನ್ಯಜೀವಿ ಬೇಟೆ ವಿರುದ್ಧದ ಕಠಿಣ ಕಾನೂನು […]

ಈಡಿಗ’ರ ಗಿರಕಿ ಹೊಡೆವ ರಾಜಕಾರಣ !

ಶಿವಮೊಗ್ಗ : ‘ಜಾತಿ’ ಹೊರತುಪಡಿಸಿದ ‘ರಾಜಕಾರಣ’ ಇಲ್ಲ ಎನ್ನುವುದು ಎಂದೋ ಸಾಬೀತಾಗಿದೆ. ಹಳ್ಳಿಯಿಂದ ದಿಲ್ಲಿವರೆಗೂ ಈ ಮಾತಿಗೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಕೆಲವೊಮ್ಮೆ ರಾಜಕಾರಣದ ಸುತ್ತ ಜಾತಿ ಗಿರಕಿ ಹೊಡೆದರೆ ಮತ್ತೆ ಕೆಲವೊಮ್ಮೆ ಜಾತಿ ಸುತ್ತ ರಾಜಕಾರಣ ಸುತ್ತುತ್ತಿರುವುದಂತೂ ಜಿಲ್ಲೆಯ ಮಟ್ಟಿಗಂತೂ ದಿಟ. ಜಿಲ್ಲೆಯಲ್ಲಿ ಹೆಚ್ಚು ಮತದಾರರಿರುವ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ ನಿರ್ಣಾಯಕರಾಗಿರುವ ‘ಈಡಿಗ’ ಸಮುದಾಯ ಕಾಂಗ್ರೆಸ್‌ ‘ಓಟ್‌ಬ್ಯಾಂಕ್‌’ ಎಂಬ ಮಾತು ಒಂದು ಕಾಲದಲ್ಲಿ ಪ್ರಚಲಿತದಲ್ಲಿತ್ತು. ರಾಜಕಾರಣ ಕೂಡ ಈ ಸಮುದಾಯದ ಸುತ್ತಲೇ […]

ಅಕ್ಕ ವಿವಿ ವ್ಯಾಪ್ತಿ: ಬಗೆಹರಿಯದ ಗೊಂದಲ

ಸಾಗರ : ನಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮದರ್ಜೆ ಮಹಿಳಾ ಕಾಲೇಜು, ವಿಜಯಪುರದ ಅಕ್ಕಮಹಾದೇವಿ ವಿವಿಗೆ ಸಂಯೋಜನೆಗೊಳ್ಳುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ 3 ತಿಂಗಳುಗಳ ಕಾಲವಕಾಶ ಸಿಕ್ಕಿದೆ. ಬೀಸುವ ದೊಣ್ಣೆ ತಪ್ಪಿದ್ದರೂ ಮತ್ತಷ್ಟು ಗೊಂದಲಗಳು ಮೂಡಿವೆ. ತನ್ನ ವ್ಯಾಪ್ತಿಯಲ್ಲಿದ್ದ ಇಂದಿರಾಗಾಂಧಿ ಕಾಲೇಜು ವಿಜಯಪುರದ ಅಕ್ಕಮಹಾದೇವಿ ವಿವಿಯ ಸಂಯೋಜನೆಗೆ ಒಳಪಟ್ಟಿರುವ ಸಂಬಂಧ ಈಗಾಗಲೇ ಕುವೆಂಪು ವಿವಿಯ ಪತ್ರವೊಂದು ಸಾಗರದ ಮಹಿಳಾ ಕಾಲೇಜಿಗೆ ತಲುಪಿದೆ. ಆನಂತರ ಏ.20ರಂದು, ಅಕ್ಕ ವಿವಿಯ ವಿಸಿ ಡಾ.ಸಬಿಹಾ ಭೂಮಿಗೌಡ, ರಿಜಿಸ್ಟ್ರಾರ್‌ ಪ್ರೊ.ಎಲ್‌.ಆರ್‌.ನಾಯಕ್‌, ಅಕ್ಕ ವಿವಿ ವ್ಯಾಪ್ತಿಯಲ್ಲಿನ 26 […]

ಯಡಿಯೂರಪ್ಪ ಆಸ್ತಿ ಬಗ್ಗೆ ಬಿಜೆಪಿ ಮೌನವೇಕೆ? ಬೇಳೂರು

ತೀರ್ಥಹಳ್ಳಿ : ಹೊಟ್ಟು ಮಾರಾಟಕ್ಕೆ ಶಿಕಾರಿಪುರಕ್ಕೆ ಬಂದು ಸಾವಿರಾರು ಕೋಟಿ ರೂ. ಆಸ್ತಿ ಗಳಿಸಿದ್ದು ಹೇಗೆಂದು ಯಡಿಯೂರಪ್ಪ ಜನರಿಗೆ ಉತ್ತರ ನೀಡಬೇಕು. ಯಡಿಯೂರಪ್ಪ ಅವರ ಆಸ್ತಿ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ಮಂಗಳವಾರ ಪಟ್ಟಣದ ಕಾಂಗ್ರೆಸ್‌ ಕಾರಾರ‍ಯಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ, ಶಿಕಾರಿಪುರದಲ್ಲಿ ಯೂನಿರ್ವಸಿಟಿ ರೀತಿಯ ಶಿಕ್ಷಣ ಸಂಸ್ಥೆ ಸ್ಥಾಪನೆ, ಅಪಾರ ಆಸ್ತಿ ಹಿಂದಿನ ರಹಸ್ಯ ಬಯಲಾಗಬೇಕು. ಯಡಿಯೂರಪ್ಪ, ಮತ್ತವರ ಪುತ್ರರ ಆಸ್ತಿಯನ್ನು ಜನರು ಗಮನಿಸಿದ್ದು […]

ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು

ಸಾಗರ: ಐದು ವರ್ಷಗಳಲ್ಲಿ ಹಲವು ಯೋಜನೆಗಳ ಮೂಲಕ ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ಈ ಹಿನ್ನೆಲೆಯಲ್ಲಿ ಬರಲಿರುವ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಮಾಡಿಕೊಡಲಿದ್ದಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಚಾಮರಾಜ ಪೇಟೆ ಬಡಾವಣೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಹೊಸ ಯುಗಕ್ಕೆ ತಕ್ಕಂತೆ ಹೆಜ್ಜೆ ಹಾಕುವ […]

ಕ್ಷೇತ್ರದಲ್ಲಿ ಸಿಗುತ್ತಿಲ್ಲ ಬಾಡಿಗೆ ಮನೆ!

ಶಿವಮೊಗ್ಗ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಕ್ಷೇತ್ರ ಶಿಕಾರಿಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಚಿಗುರು ಮೀಸೆಯ ಯುವಕನಿಗೆ ಅಲ್ಲಿನ ಯಾರೊಬ್ಬರೂ ಬಾಡಿಗೆಗೆ ಮನೆ ಕೊಡುತ್ತಿಲ್ಲ! ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ 25ರ ಹರೆಯದ ವಿನಯ್ ರಾಜಾವತ್ ತಮ್ಮ ವಿಭಿನ್ನ ನಡೆಯ ಮೂಲಕ ಪ್ರಮುಖ ಪಕ್ಷಗಳ ಮುಖಂಡರು ಹುಬ್ಬೇರಿಸುವಂತೆ ಮಾಡಿದ್ದರು. ಸ್ನೇಹಿತರ ಜತೆಗೂಡಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬಂದು, ಸೆಲ್ಫಿ ತೆಗೆದುಕೊಂಡು ನಂತರ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಇದು ಎಲ್ಲೆಡೆ […]

ಸಿದ್ದರಾಮಯ್ಯ ಈ ಬಾರಿ ಗೆದ್ದು ತೋರಿಸಲಿ: ಈಶ್ವರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದುಬರಲಿ. ಆನಂತರ ಮತ್ತೆ ಮುಖ್ಯಮಂತ್ರಿ ಆಗುವ ಕುರಿತು ಯೋಚಿಸುವುದು ಒಳಿತು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದರು. ಗುರುವಾರ ಚುನಾವಣಾ ನಾಮಪತ್ರ ಸಲ್ಲಿಸಿದ ಬಳಿಕ ಎನ್‌ಡಿವಿ ಹಾಸ್ಟೆಲ್‌ ಆವರಣದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರ ಆಗಿಬರುವ ಲಕ್ಷಣವಿಲ್ಲ. ಹೀಗಾಗಿ ಬಾದಾಮಿ ಕ್ಷೇತ್ರದತ್ತ ಮುಖ ಮಾಡಿದ್ದರು ಎಂದು ಛೇಡಿಸಿದರು. […]

ಮೆಗ್ಗಾನ್‌ಗೆ ವರವಾದ ವೈದ್ಯರ ಮುಷ್ಕರ!

ಶಿವಮೊಗ್ಗ : ಕಳೆದ ನವೆಂಬರ್‌ನಲ್ಲಿ ಖಾಸಗಿ ವೈದ್ಯರು ವಿವಿಧ ಬೇಡಿಕೆಗಳಿಗಾಗಿ ನಡೆಸಿದ ಮುಷ್ಕರ ಮೆಗ್ಗಾನ್‌ ಜಿಲ್ಲಾಸ್ಪತ್ರೆಗೆ ವರದಾನವಾಗಿ ಪರಿಣಮಿಸಿದೆ. ಇದು ಕೇಳಲು ಅಚ್ಚರಿ ಎನಿಸಿದರೂ ವಾಸ್ತವ. ಆರೋಗ್ಯ ಕೈಕೊಟ್ಟಾಗ ಮಧ್ಯಮ ಮತ್ತು ಶ್ರೀಮಂತ ವರ್ಗದವರು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ, ಮುಷ್ಕರದ ವೇಳೆ ಸುಮಾರು ದಿನ ಚಿಕಿತ್ಸೆ ಸಿಗದೆ ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಯನ್ನೇ ಅವಲಂಬಿಸಿದ್ದರು. ಇಲ್ಲಿಯ ಸೌಕರ್ಯ ಮತ್ತು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ದೊರಕುವುದನ್ನು ಮನಗಂಡು ಬಹುತೇಕ ರೋಗಿಗಳು ಇಲ್ಲಿಗೆ ಬರಲಾರಂಭಿಸಿದ್ದಾರೆ. ಜಿಲ್ಲಾಸ್ಪತ್ರೆ ಎಂದರೇ ರೇಸಿಗೆ […]

ಕುಮಾರ್‌ಗೆ ಪಿತ್ರಾರ್ಜಿತ ಆಸ್ತಿ ಇಲ್ಲ, ಗೌಡರ ವಿರುದ್ಧ ಕೇಸ್‌ಗಳೇ ಇಲ್ಲ

ಶಿವಮೊಗ್ಗ : ಸಹೋದರನಿಗೆ ಸವಾಲು ಹಾಕುವ ಉದ್ದೇಶದಿಂದಲೆ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ತಮ್ಮ ಮಧು ಬಂಗಾರಪ್ಪಗಿಂತ ಅರ್ಧದಷ್ಟೂ ಆಸ್ತಿ ಹೊಂದಿಲ್ಲ. ಕುಮಾರ್‌ ಅವರು ಒಟ್ಟಾರೆ 28.28 ಕೋಟಿ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದು ಈ ಎಲ್ಲ ಆಸ್ತಿ ಸ್ವಯಾರ್ಜಿತ. ಇವರಿಗೆ ಪಿತ್ರಾರ್ಜಿತವಾಗಿ ಬಂದ ಯಾವುದೇ ಆಸ್ತಿ ಇಲ್ಲವೆಂದು ಅವರ ಘೋಷಿತ ಪ್ರಮಾಣ ಪತ್ರ ಹೇಳುತ್ತಿದೆ. 2013 ಚುನಾವಣೆಗೆ ಸ್ಪರ್ಧಿಸಿದ ವೇಳೆ ಇವರ ಬಳಿ 16.44 ಕೋಟಿ ರೂ. ಆಸ್ತಿ ಇತ್ತು. ಐದು ವರ್ಷದಲ್ಲಿ […]

ಅಕ್ಕನ ಗಂಡನ ವಿಷಯಕ್ಕೆ ವಿಷ ಕುಡಿದ ತಂಗಿ

ಶಿವಮೊಗ್ಗ : ಅಕ್ಕನ ಗಂಡನ ವಿಷಯಕ್ಕೆ ಜಗಳವಾಡಿ ದೂರು ದಾಖಲಿಸಲು ಬಂದ ತಂಗಿ ಎಸ್‌ಪಿ ಕಚೇರಿಯಲ್ಲಿಯೇ ವಿಷ ಸೇವಿಸಿದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ಅಕ್ಕ ಸುಧಾ ಅವರ ಗಂಡ ಸರಕಾರಿ ನೌಕರನಾಗಿದ್ದು, ಈ ಹಿಂದೆ ತುಮಕೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದರು. ಇದು ತಂಗಿ ರೇಖಾಗೆ ಇತ್ತೀಚೆಗೆ ತಿಳಿದಿದೆ. ಅಕ್ಕನ ಬಳಿ ಈ ವಿಷಯವಾಗಿ ಮಾತನಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಏರ್ಪಟ್ಟು ಒಂದು ವಾರದ ಹಿಂದೆ ಇಬ್ಬರೂ ಕಿತ್ತಾಡಿಕೊಂಡಿದ್ದರು ಎಂದು […]