ಏಪ್ರಿಲ್‌ ಫೂಲ್‌ ಅಲ್ಲ, ‘ಕೂಲ್‌’ ಡೇ

ಭದ್ರಾವತಿ : ಏಪ್ರಿಲ್ ಬಂತೆಂದರೆ ‘ಫೂಲ್’ ಮಾಡುವದಕ್ಕೊಂದು ಕಾರಣ ಹುಡುಕುವ ಈ ದಿನಮಾನದಲ್ಲಿ ಭದ್ರಾವತಿ ನಗರದ ಇರುವೆ ಟ್ರಸ್ಟ್ ‘ ಏಪ್ರಿಲ್ ಕೂಲ್’ ಎಂಬ ಹೆಸರಲ್ಲಿ ಸಸಿ ನೆಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಿತು. ತಮ್ಮ ಸ್ವಾರ್ಥಕ್ಕಾಗಿ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡುತ್ತಿರುವ ವರ್ಗ ಒಂದೆಡೆಯಾದರೆ, ಇದೇ ಸಂಪತ್ತನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳ ಇನ್ನೊಂದು ವರ್ಗ ಪ್ರಯತ್ನ ಮಾಡುತ್ತಲೇ ಇದೆ. ಇಂತಹ ಪ್ರಯತ್ನಕ್ಕೆ ಭದ್ರಾವತಿಯಇರುವೆ ಕಾರ್ಯೋನ್ಮುಖವಾಗಿದೆ. ಸೋಮವಾರ ಸಂಜೆ ನ್ಯೂಟೌನ್ ಜಂಟ್ಸ್ ಕ್ಲಬ್ ಆವರಣದಲ್ಲಿ […]

ಬೇಡಿಕೆ ಈಡೇರದಿದ್ದರೆ ಮೌಲ್ಯಮಾಪನ ಬಹಿಷ್ಕಾರ

ರಾಜ್ಯದ 412 ಸರಕಾರಿ ಪದವಿ ಕಾಲೇಜುಗಳಲ್ಲಿ 13500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆದು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಪ್ರತಿವರ್ಷ 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ        – ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮಿತಿ ರಾಜ್ಯಾಧಕ್ಷ ಡಾ.ಎಚ್‌.ಸೋಮಶೇಖರ್‌ ಶಿವಮೊಗ್ಗಿ  ಶಿವಮೊಗ್ಗ: ಅತಿಥಿ ಉಪನ್ಯಾಸಕರು ಸಮಸ್ಯೆಯಲ್ಲಿಯೇ ಕೈ ತೊಳೆಯುತ್ತಿದ್ದರೂ ಇದುವರೆಗೆ ಸರಕಾರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೇಡಿಕೆಗಳು ಶೀಘ್ರವೇ ಈಡೇರದಿದ್ದರೆ ಮೌಲ್ಯಮಾಪನವನ್ನು ಬಹಿಷ್ಕರಿಸಲಾಗುವುದು ಎಂದು […]

ಶಿವಮೊಗ್ಗದಲ್ಲಿ ಈ ಬಾರಿ ಗೆಲ್ಲೋದ್ಯಾರು…??

ಶಿವಮೊಗ್ಗದಲ್ಲಿ ಈ ಬಾರಿ ಗೆಲ್ಲೋದ್ಯಾರು…?? ಮೋದಿ ಅಲೆ ಇದ್ಯೋ ಇಲ್ವೋ…?? ‘ಕುರುಕ್ಷೇತ್ರ’ದೊಂದಿಗೆ ಶಿವಮೊಗ್ಗ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ರುದ್ರೇಗೌಡರ ಮಾತು

ನೀರಾವರಿ ಯೋಜನೆಯ ಶ್ರೇಯ ಸಮ್ಮಿಶ್ರ ಸರ್ಕಾರದ್ದು: ಡಿ.ಕೆ.ಶಿ.

ಶಿವಮೊಗ್ಗ: ಜಿಲ್ಲೆಯಲ್ಲಿ ನೀರಾವರಿ ಯೋಜನೆಯ ಸಂಪೂರ್ಣ ಕ್ರೆಡಿಟ್ ಸಮ್ಮಿಶ್ರ ಸರ್ಕಾರಕ್ಕೆ ಸಲ್ಲಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಮಧು ಬಂಗಾರಪ್ಪ ಪಾದಯಾತ್ರೆ ಸಂದರ್ಭದಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಕಾಂಗ್ರೆಸ್, ಜೆಡಿಎಸ್ ಮುಖಂಡರು ಮನವಿ ಸಲ್ಲಿಸಿದ್ದರು. ನುಡಿದಂತೆ ನಡೆಯಲು ಸಿಎಂ ಕುಮಾರಸ್ವಾಮಿ ಬಜೆಟ್​ನಲ್ಲಿ ನೀರಾವರಿ ಯೋಜನೆ ಮಂಜೂರು ಮಾಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಜಾತಿ, ವರ್ಗ, ಸಮುದಾಯವೆಂದು […]

ಮೋದಿ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಚಾರ ನಡೆಸಿ

ಶಿವಮೊಗ್ಗ: ಮೋದಿನೂ ಇಲ್ಲ…ಏನೂ ಇಲ್ಲ…. ಯಾರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ಸರಿಯಾಗಿ ಚುನಾವಣೆ ನಡೆಸಿ. ಭದ್ರಾವತಿಯಲ್ಲಿ ಕನಿಷ್ಠ ಒಂದು ಲಕ್ಷ ಮತಗಳ ಲೀಡ್ ನೀಡಬೇಕು. ಸೋತ ಜಾಗದಲ್ಲೇ ಮಧು ಬಂಗಾರಪ್ಪ ಗೆಲ್ಲಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಹುರಿದುಂಬಿಸಿದ್ದಾರೆ. ಶನಿವಾರ ಭದ್ರಾವತಿಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಲು ಶಿಲೆಯಾಗಲು ಉಳಿಯೇಟು ಬೇಕೇಬೇಕು. ಮಧುಬಂಗಾರಪ್ಪ ಈಗಾಗಲೇ ಸಾಕಷ್ಟು ಹೊಡೆತ ತಿಂದಿದ್ದಾರೆ. ಬಂಗಾರಪ್ಪ ಅವರ ಎಲ್ಲ ಗುಣಗಳು ಮಧು ಬಂಗಾರಪ್ಪ ಅವರಲ್ಲಿವೆ. ವಿಧಾನಸಭೆ ಚುನಾವಣೆಯಲ್ಲಿ […]

ಮತದಾನ ಮಾಡದಿದ್ದರೆ ಸಂವಿಧಾನಕ್ಕೆ ಅಗೌರವ

ಶಿವಮೊಗ್ಗ: ಯುವಜನತೆ ಮತದಾನದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಡಿಸಿ ಕೆ.ಎ.ದಯಾನಂದ ಹೇಳಿದರು. ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ, ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ವಿಶೇಷ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಯುವಜನರು ಮತದಾನದ ಆಸಕ್ತಿ ಕಳೆದುಕೊಳ್ಳಬಾರದು. ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಯುವಜನತೆ ಪಾತ್ರ ಮುಖ್ಯ. ಜಿಲ್ಲೆಯನ್ನು ಮೊದಲ ಸ್ಥಾನಕ್ಕೇರಿಸಲು ಯುವಜನತೆ ಮುಂದಾಗಬೇಕು ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ದೇವರು ಎಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾನ […]

ಅನುಮತಿಗೆ ವಿಶೇಷ ಕೌಂಟರ್ ಆರಂಭ

ಸಾಗರ: ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳಿಗೆ 48 ಗಂಟೆ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದ್ದು ಏಕಗವಾಕ್ಷಿ ಮೂಲಕ ವಿವರ ಪಡೆಯಹುದು ಎಂದು ಉಪವಿಭಾಗಾಧಿಕಾರಿ ಎಚ್.ವಿ. ದರ್ಶನ್ ಹೇಳಿದರು. ಕಚೇರಿಯಲ್ಲಿ ಈ ಕುರಿತು ಗುರುವಾರ ಮಾಹಿತಿ ನೀಡಿದ ಅವರು, ಚುನಾವಣೆ ದಿನಾಂಕ ಘೊಷಣೆಯಾದ ದಿನದಿಂದ ನೀತಿಸಂಹಿತೆ ಜಾರಿಯಾಗಿದೆ. ಮದುವೆ, ಇತರೆ ಧಾರ್ವಿುಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕಾದ ಅವಶ್ಯಕತೆ ಇಲ್ಲ. ಆದರೆ ಕಾರ್ಯಕ್ರಮದ ಬಗ್ಗೆ ವಿವರ ನೀಡುವುದು ಒಳಿತು ಎಂದರು. ಆಯಕಟ್ಟಿನ ಜಾಗಗಳಲ್ಲಿ […]

ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ

ಗದಗ: ಮಂಡ್ಯ ರಾಜಕೀಯ ವಿಚಾರದಲ್ಲಿ ನಟಿ ಸುಮಲತಾ ಅಂಬರೀಷ್​ ಅವರು ತೆಗೆದುಕೊಳ್ಳುವ ಮೂಲಕ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ತಿಳಿಸಿದರು. ಗದಗಿನಲ್ಲಿ ಗುರುವಾರ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರಾ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅಬರು ದಿವಂಗತ ಅಂಬರೀಷ್​ ಅವರು ಮಂಡ್ಯ ಜನರ ಮನ ಗೆದ್ದ ನಾಯಕ. ಅವರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಶೋಭೆ ತರುವಂತದಲ್ಲ. ಪುತ್ರ ನಿಖಿಲ್ ಕುಮಾರ್​ಗೆ ಅಡ್ಡಿಯಾಗುತ್ತದೆ […]

ಮಂಗನಕಾಯಿಲೆಗೆ ಮತ್ತೊಂದು ಬಲಿ

ತೀರ್ಥಹಳ್ಳಿ: ಮಂಗನ ಕಾಯಿಲೆಯಿಂದ ತಾಲೂಕಿನಲ್ಲಿ ಎರಡನೇ ಸಾವು ಸಂಭವಿಸಿದೆ. ಕೆಎಫ್​ಡಿ ಸೋಂಕಿನಿಂದ ಬಳಲುತ್ತಿದ್ದ ಕುಕ್ಕೆ ಬಾಂಡ್ಯ ಗ್ರಾಪಂ ವ್ಯಾಪ್ತಿಯ ರಾಜು (55) ಎಂಬುವವರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜು ಅವರು ಕಳೆದ ಒಂದು ತಿಂಗಳಿನಿಂದ ಜ್ವರದಿಂದ ನರಳುತ್ತಿದ್ದರು. ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಫೆಬ್ರವರಿ 12ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಕೂಡ ಮಂಡಗದ್ದೆಯ ಒಬ್ಬರಿಗೆ ಕೆಎಫ್​ಡಿ ಸೋಂಕು ತಗುಲಿರುವುದು ಧೃಡಪಟ್ಟಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು ಮಂಡಗದ್ದೆ ಸಮೀಪದ ತೋಟದಕೊಪ್ಪದ […]

ಕೃಷಿ, ತೋಟಗಾರಿಕೆ ವಿವಿ ಸುಗ್ಗಿ ಸಂಭ್ರಮ

ಶಿವಮೊಗ್ಗ: ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿಯ 4ನೇ ಘಟಿಕೋತ್ಸವ ‘ಸುಗ್ಗಿ ಸಂಭ್ರಮ-4’ ಮಾ.9ರ ಬೆಳಗ್ಗೆ 11ಕ್ಕೆ ವಿವಿ ಆವರಣದಲ್ಲಿ ನಡೆಯಲಿದೆ ಎಂದು ವಿವಿ ಕುಲಪತಿ ಡಾ. ಎಂ.ಕೆ.ನಾಯ್್ಕ ತಿಳಿಸಿದರು. ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಿ.ಆರ್.ವಾಲಾ ಪದವಿ ಪ್ರದಾನ ಮಾಡಲಿದ್ದಾರೆ. ಸಹ ಕುಲಾಧಿಪತಿ, ಕೃಷಿ ಸಚಿವ ಶಿವಶಂಕರ ರೆಡ್ಡಿ ಉಪಸ್ಥಿತರಿರಲಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್​ನ ಕಾರ್ಯದರ್ಶಿ ಡಾ.ತ್ರಿಲೋಚನ ಮಹಾಪಾತ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 344 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:2018-19ನೇ […]