ನಂ ಶಿವಮೊಗ್ಗ ಇದು ಸ್ಮಾರ್ಟ್ ಶಿವಮೊಗ್ಗೆಯ ಸ್ಮಾರ್ಟ್ ವೆಬ್ ಸೈಟ್. ಶಿವಮೊಗ್ಗದ ಹೆಮ್ಮೆಯ ನಾಗರಿಕರೆನಿಸಿಕೊಳ್ಳಲು ನಾವು ಸ್ವಲ್ಪ ಸ್ಮಾರ್ಟ್ ಆಗಬೇಕೆಂದು ಯೋಚಿಸಿದಾಗ ಹೊಳೆದಿದ್ದೇ ನಂ ಶಿವಮೊಗ್ಗ ಡಾಟ್ ಕಾಮ್ . ಇದು ಶಿವಮೊಗ್ಗದ ಸಮಗ್ರ ಮಾಹಿತಿ ಮತ್ತು ಸುದ್ದಿ ಜಾಲತಾಣ. ಹಾಗೆಂದ ಮಾತ್ರಕ್ಕೆ ಇದು ಕೇವಲ ಶಿವಮೊಗ್ಗೆಯ ಸುದ್ದಿ ಅಥವಾ ಮಾಹಿತಿ ನೀಡುವ ಜಾಲ ತಾಣ ಮಾತ್ರವಲ್ಲ ಶಿವಮೊಗ್ಗದ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಸಮಸ್ತ ಮಾಹಿತಿಗಳನ್ನು ನೀಡುವಂತಹ ಕೆಲಸ ನಂ ಶಿವಮೊಗ್ಗ ಡಾಟ್ ಕಾಂನಲ್ಲಿ ಆಗುತ್ತದೆ . ಶಿವಮೊಗ್ಗದ ಸರ್ವೀಸ್ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ನೀಡುವ ಹಾಗೂ ಗಲ್ಲಿ ಗಲ್ಲಿಗಳಲ್ಲಿರುವ ಅಂಗಡಿಗಳು ವ್ಯವಹಾರಗಳು ಶಾಲೆಗಳು ಆಸ್ಪತ್ರೆಗಳು ಈ ರೀತಿಯಲ್ಲಿ ಶಿವಮೊಗ್ಗದ ಎಲ್ಲ ಮಾಹಿತಿಗಳನ್ನು ಹೊಂದಿರುವ ಶಿವಮೊಗ್ಗದ ಏಕೈಕ ವೆಬ್ ಸೈಟ್ ನಂ ಶಿವಮೊಗ್ಗ .ಕಾಂ ಇಲ್ಲಿ ನಗರದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ, (ಇವೆಂಟ್ ಕ್ಯಾಲೆಂಡರ್) ಕಾರ್ಯಕ್ರಮ ಮಾಹಿತಿಯನ್ನು ಆಯೋಜಕರು ನೇರವಾಗಿ ವೆಬ್ಸೈಟ್ ನಲ್ಲಿ ದಾಖಲಿಸಲು ಅವಕಾಶ ಮಾಡಿಕೊಡಲಾಗುವುದು. ಇದು ಸ್ಮಾರ್ಟ್ ಸಿಟಿಯ‍ಾದ ನಂ ಶಿವಮೊಗ್ಗದ ಹೆಮ್ಮೆಯ ವೆಬ್ ಸೈಟ್ ಆಗಬೇಕೆಂಬುದು ನಮ್ಮ ಗುರಿ … ಈ ನಿಟ್ಟಿನಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದ್ದು ನಿಮ್ಮ ಸಲಹೆ ಮತ್ತು ಸಹಕಾರವೂ ಕೂಡ ಅಗತ್ಯ . ಜೊತೆಗಿರಿ ಮಾಧ್ಯಮ ಲೋಕದ ಹೊಸ ಸಾಧ್ಯತೆಗಳನ್ನು ನಾವೆಲ್ಲರೂ ಸೇರಿ ರೂಪಿಸೋಣ … ಧನ್ಯವಾದಗಳು ನಂ ಶಿವಮೊಗ್ಗ ಡಾಟ್ ಕಾಮ್