Radius: Off
Radius:
km Set radius for geolocation
Search

ಯುವಶಕ್ತಿ ರಾಷ್ಟ್ರದ ಶಕ್ತಿ : ಬಿ.ವೈ.ರಾಘವೇಂದ್ರ

ಶಿಕಾರಿಪುರ: ಭಾರತ ವಿಶ್ವದಲ್ಲಿ ಅತಿಹೆಚ್ಚು ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ. ಯುವಶಕ್ತಿ ರಾಷ್ಟ್ರದ ಶಕ್ತಿ. ದೇಶದ ಅಭಿವೃದ್ಧಿಯ ಹಾದಿಯಲ್ಲಿ ಯುವಕರ ಪಾತ್ರ ಹಿರಿದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾಂಪೌಂಡ್ ನಿರ್ವಣಕ್ಕೆ ಶಂಕುಸ್ಥಾಪನೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಯುವಕರು ರಾಷ್ಟ್ರೀಯ ಚಿಂತನೆಗಳ ಕಡೆಗೆ ಗಮನಹರಿಸುವುದು ಒಳ್ಳೆಯದು. ರಾಷ್ಟ್ರಕ್ಕಾಗಿ ನಾವು ಎಂಬ ಕಲ್ಪನೆ ಬರಬೇಕು ಎಂದರು.

ಕಾಲೇಜು ಕ್ಯಾಂಪಸ್​ಗೆ ಸರಿಯಾದ ಭದ್ರತೆ ಇರಲಿಲ್ಲ. ಪ್ರಾಚಾರ್ಯರು ಈ ಬಗ್ಗೆ ಗಮನಕ್ಕೆ ತಂದಿದ್ದರು. ಈಗ ಕಾಲ ಕೂಡಿಬಂದಿದೆ. 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್ ನಿರ್ವಣವಾಗಲಿದೆ. ಈ ಕಾಲೇಜಿನ ಮೂಲಭೂತ ಸೌಕರ್ಯಗಳಿಗಾಗಿ ಯಡಿಯೂರಪ್ಪ ಸಾಕಷ್ಟು ಶ್ರಮಿಸಿದ್ದಾರೆ. ಈ ಕಾಲೇಜು ಯಾವುದೇ ಖಾಸಗಿ ಕಾಲೇಜಿಗಿಂತ ಯಾವುದರಲ್ಲೂ ಕಡಿಮೆ ಇರಬಾರದು. ಕಾಲೇಜಿಗೆ ಏನೇ ಸೌಲಭ್ಯ ಬೇಕಿದ್ದರೂ ನಾನು ಸರ್ಕಾರದಿಂದ ಕೊಡಿಸುತ್ತೇನೆ. ಬೈಂದೂರು ಸೇರಿ ಎಂಟು ತಾಲೂಕುಗಳಲ್ಲಿ ಸರ್ಕಾರಿ ಜ್ಯೂನಿಯರ್, ಪ್ರಥಮದರ್ಜೆ 54 ಕಾಲೇಜುಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳಿಗಾಗಿ ಒಂದೂವರೆ ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟ. ವಿದ್ಯಾರ್ಥಿಗಳು ಇದನ್ನು ಅತ್ಯಂತ ಗಂಭೀರ ಪರಿಗಣಿಸಿ ಶ್ರದ್ಧೆಯಿಂದ ಅಭ್ಯಾಸ ಮಾಡಿ ಮುಂದೆ ಬರಬೇಕು. ಪ್ರತಿ ವಿದ್ಯಾರ್ಥಿಯೂ ಈ ನಾಡಿನ ಆಸ್ತಿ. ನಿಮ್ಮ ಪ್ರತಿಭೆಯನ್ನು ಮೊಬೈಲ್ ಹಾಗೂ ದುಶ್ಚಟಗಳಿಗೆ ಮೀಸಲಿಡದೇ ಓದುವ ಕಡೆಗೆ ಗಮನಕೊಡಿ. ನಮ್ಮ ಜೀವನದ ಅಮೂಲ್ಯ ಮತ್ತು ಆನಂದದ ದಿನಗಳೆಂದರೆ ಅದು ವಿದ್ಯಾರ್ಥಿ ಜೀವನ. ನಾನೂ ಕೂಡ ಮೂರು ಜಿಲ್ಲೆಗಳಿಂದ ಸೆನೆಟ್ ಮೆಂಬರ್ ಆಗಿ ವಿದ್ಯಾರ್ಥಿ ಸಂಘಟನೆ ಹಾಗೂ ಯುವ ಸಂಘಟನೆಗಳಲ್ಲಿ ಕೆಲಸ ಮಾಡಿದ್ದೇನೆ. ನ್ಯಾಕ್​ನಿಂದ ಈ ಕಾಲೇಜಿಗೆ ‘ಬಿ’ ರ್ಯಾಂಕ್ ಬಂದಿದೆ. ಅದು ‘ಎ’ ದರ್ಜೆಗೆ ಏರಬೇಕು ಎಂದು ಹೇಳಿದರು. ತಾಪಂ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ, ಎಪಿಎಂಸಿ ಅಧ್ಯಕ್ಷ ಸಿದ್ರಾಮಪ್ಪ, ಮಾಜಿ ಅಧ್ಯಕ್ಷ ಸುಕೇಂದ್ರಪ್ಪ, ಪುರಸಭೆ ಸದಸ್ಯ ಟಿ.ಎಸ್.ಮೋಹನ್, ಪ್ರಾಚಾರ್ಯ ಡಾ. ಜಿ.ಆರ್.ಹೆಗಡೆ ಇತರರಿದ್ದರು.

Leave a Reply

Your email address will not be published. Required fields are marked