Radius: Off
Radius:
km Set radius for geolocation
Search

ಯಶಸ್ವಿನಿ ಯೋಜನೆ ಜಾರಿಗೆ ತನ್ನಿ: ದತ್ತಾತ್ರಿ

ಶಿವಮೊಗ್ಗ: ಆರೋಗ್ಯ ಕರ್ನಾಟಕ ಯೋಜನೆಯಿಂದ ಸಾರ್ವಜನಿಕರಿಗೆ ಅನಾನುಕೂಲವೇ ಹೆಚ್ಚಾಗಿರುವುದರಿಂದ ಹಿಂದಿನ ಯಶಸ್ವಿನಿ ಆರೋಗ್ಯ ಯೋಜನೆಯನ್ನೇ ಜಾರಿಗೆ ತರುವಂತೆ ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಎಸ್‌. ದತ್ತಾತ್ರಿ, ರಾಜ್ಯ ಸರ್ಕಾರದ ಹೊಸ ಆರೋಗ್ಯ ಯೋಜನೆಯಿಂದ ಲಕ್ಷಾಂತರ ಜನರ ಆರೋಗ್ಯ ಸೌಲಭ್ಯಕ್ಕೆ ಕತ್ತರಿ ಹಾಕಿದಂತಾಗಿದೆ ಎಂದು ದೂರಿದರು.

ಈ ನಾಡಿನ ಜೀವನಾಡಿ ಆಹಾರ ಬೆಳೆಯುವ ರೈತ. ಈ ಪೈಕಿ ಹೆಚ್ಚಿನವರು ಬಡವರು ಹಾಗೂ ಮಧ್ಯಮ ವರ್ಗದವರು ಆಗಿದ್ದಾರೆ. ಇಂತವರಿಗೆ ಅನುಕೂಲವಾಗಲೆಂದು ಕಳೆದ 14 ವರ್ಷಗಳಿಂದ ವರದಾನವಾಗಿದ್ದ ಯಶಸ್ವಿನಿ ಆರೋಗ್ಯ ಸೌಲಭ್ಯ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ
ರದ್ದುಗೊಳಿಸಿರುವುದರಿಂದ ಜನರು ಪರಿತಪಿಸುವಂತಾಗಿದೆ.

ಹೊಸ ಆರೋಗ್ಯ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಇನ್ನೂ ಸರಿಯಾದ ವ್ಯವಸ್ಥೆ ಇಲ್ಲ. ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಬಂದು ಆರೋಗ್ಯ ಕಾರ್ಡ್‌ ಪಡೆಯಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ ಎಂದು ದೂರಿದರು.

ಆರೋಗ್ಯ ಕರ್ನಾಟಕ ಯೋಜನೆಯಿಂದ ಅನಾನುಕೂಲಗಳು ಹೆಚ್ಚಿವೆ, ಯಶಸ್ವಿನಿಯಲ್ಲಿ ಪ್ರತಿ ವ್ಯಕ್ತಿ 2.3 ಲಕ್ಷ ರೂ.ವರೆಗೂ ಚಿಕಿತ್ಸೆಯ ಸೌಲಭ್ಯ ಪಡೆಯಬಹುದಾಗಿತ್ತು. ಆದರೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಕುಟುಂಬದ ಐದು ಸದಸ್ಯರಿಗೆ ಸೇರಿದಂತೆ ಕೇವಲ 2.30 ಲಕ್ಷದವರೆಗೆ ಮಾತ್ರ ಚಿಕಿತ್ಸೆ ವೆಚ್ಚ ಭರಿಸಲಾಗುವುದು. ಈ ಸಂದರ್ಭದಲ್ಲಿ ಕುಟುಂಬದ ಇನ್ನೊರ್ವರಿಗೆ ಆರೋಗ್ಯ ಸಮಸ್ಯೆಯಾದರೆ ಯೋಜನೆಯಿಂದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಜತೆಗೆ ಇನ್ನು ಕೆಲವು ನ್ಯೂನತೆಗಳಿವೆ ಎಂದರು.

ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಈ ಹಿಂದೆ ರಾಜೀವ್‌ ಆರೋಗ್ಯ ಭಾಗ್ಯ ಯೋಜನೆಯಡಿ ಕೇವಲ ಶೇ.30ರಷ್ಟು ಹಣ ಕಟ್ಟಿದರೆ ಚಿಕಿತ್ಸೆ ಸಿಗುತ್ತಿತ್ತು. ಈಗ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಶೇ.70ರಷ್ಟು ಹಣ ಭರಿಸಬೇಕಿದೆ ಎಂದರು.

ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಎಲ್ಲಾ ರೋಗಗಳಿಂದ ಬಳಲುವ ರೋಗಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ನಂತರ ಅಲ್ಲಿನ ವೈದ್ಯರಿಂದ ಶಿಫಾರಸ್ಸು ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಇದರಿಂದ ಸರ್ಕಾರಿ ವೈದ್ಯರಿಗೆ ಲಂಚ ನೀಡಿ ಶಿಫಾರಸ್ಸು ಮಾಡಿಸುವ ಪ್ರಮೇಯ ಹೆಚ್ಚುವುದು. ಭ್ರಷ್ಟಾಚಾರಕ್ಕೆ ಅವಕಾಶವಾಗಲಿದೆ ಎಂದು ಹೇಳಿದರು.

ಹಲವಾರು ನ್ಯೂನತೆ ಇರುವ ಆರೋಗ್ಯ ಕರ್ನಾಟಕ ಯೋಜನೆ ರೈತರಿಗೆ ಹಾಗೂ ಬಡವರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಆದ್ದರಿಂದ ಹೊಸ ಯೋಜನೆಯನ್ನು ತಕ್ಷಣ ಸ್ಥಗಿತ ಮಾಡಬೇಕು ಹಾಗೂ ಯಶಸ್ವಿನಿ ಯೋಜನೆ ಪ್ರಾರಂಭಿಸಬೇಕೆಂದು. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲು, ಹಿಂದಿನ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಮಧುಸೂದನ್‌, ಋಷಿಕೇಶ್‌ ಪೈ, ರತ್ನಾಕರ್‌ ಶೆಣೈ, ಮಾಲತೇಶ್‌, ಅರುಣ್‌ ಕುಮಾರ್‌ ಮತ್ತಿತರರು ಇದ್ದರು.

ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಮಾಡಿರುವ ಹಣ ತುಂಬಾ ಕಡಿಮೆ ಆಗಿರುವುದರಿಂದ ಆಸ್ಪತ್ರೆಯವರು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಇನ್ನೂ ಯಾವ ಖಾಸಗಿ ಆಸ್ಪತ್ರೆಗಳೂ ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳದಿರುವುದು ದೌರ್ಭಾಗ್ಯದ ಸಂಗತಿ.

Leave a Reply

Your email address will not be published. Required fields are marked