ಮತದಾನ ಮಾಡದಿದ್ದರೆ ಸಂವಿಧಾನಕ್ಕೆ ಅಗೌರವ

ಮತದಾನ ಮಾಡದಿದ್ದರೆ ಸಂವಿಧಾನಕ್ಕೆ ಅಗೌರವ

ಮತದಾನ ಮಾಡದಿದ್ದರೆ ಸಂವಿಧಾನಕ್ಕೆ ಅಗೌರವ

ಶಿವಮೊಗ್ಗ: ಯುವಜನತೆ ಮತದಾನದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಡಿಸಿ ಕೆ.ಎ.ದಯಾನಂದ ಹೇಳಿದರು.

ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ, ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ವಿಶೇಷ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.

ಯುವಜನರು ಮತದಾನದ ಆಸಕ್ತಿ ಕಳೆದುಕೊಳ್ಳಬಾರದು. ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಯುವಜನತೆ ಪಾತ್ರ ಮುಖ್ಯ. ಜಿಲ್ಲೆಯನ್ನು ಮೊದಲ ಸ್ಥಾನಕ್ಕೇರಿಸಲು ಯುವಜನತೆ ಮುಂದಾಗಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ದೇವರು ಎಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ಪಾಲ್ಗೊಳ್ಳಬೇಕು. ಮತದಾನ ಮಾಡದಿದ್ದರೆ ಸಂವಿಧಾನಕ್ಕೆ ಅಗೌರವ ತೋರಿಸಿದಂತೆ. ಸಂವಿಧಾನಕ್ಕೆ ಸಲ್ಲಿಸುವ ಗೌರವ ಪ್ರಾಮಾಣಿಕ ಆಗಿದ್ದರೆ ದೇಶದ ಆಡಳಿತ ವ್ಯವಸ್ಥೆ ಉತ್ತಮ ಆಗಿರುತ್ತದೆ ಎಂದರು.

1952ರ ಮೊದಲ ಚುನಾವಣೆ ಸಂದರ್ಭದಲ್ಲಿ ಶೇ. 15-20ರಷ್ಟು ಸಾಕ್ಷರತೆ ಪ್ರಮಾಣವಿತ್ತು. ಆಗ ಶೇ. 75 ಮತದಾನ ನಡೆದಿತ್ತು. ಇಂದು ಶೇ. 86ರಷ್ಟು ಸಾಕ್ಷರತೆ ಪ್ರಮಾಣ ಇದೆ. ಆದರೆ ಮತದಾನದ ಪ್ರಮಾಣ ಶೇ. 65ಕ್ಕೆ ಕುಸಿದಿದೆ. ಶೇ. 100 ಮತದಾನ ಆಗುವ ದಿಸೆಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಮತದಾನ ಒಂದು ಹಕ್ಕು. ನೋಟಾ ಯಾವ ಅಭ್ಯರ್ಥಿಯು ಅರ್ಹನಲ್ಲ ಎಂಬ ನಿಮ್ಮ ಪ್ರತಿಭಟನೆಯಾಗಿದೆ. ಮತದಾನದಿಂದ ಹಿಂದೆ ಸರಿಯುವವರ ನಿರ್ಧಾರವೇನೆಂದು ಸ್ಪಷ್ಟತೆ ಇಲ್ಲ. ಹೀಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಮತದಾನದಿಂದ ದೂರ ಉಳಿಯಬಾರದು. ಯುವಜನರು ಊರಿನ ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಎಡಿಸಿ ಪೂರ್ಣಿಮಾ ಪ್ರತಿಜ್ಞಾ ವಿಧಿ ಬೋಧಿಸಿದರು. ನೋಡಲ್ ಅಧಿಕಾರಿ ಟಿ.ಆರ್.ಗೋಪಾಲ್, ಕಾಲೇಜಿನ ಪ್ರಾಚಾರ್ಯ ಎಚ್.ಚಂದ್ರಶೇಖರ್, ಸಮನ್ವಯ ಕಾಶಿ ಇದ್ದರು.

Leave a Reply

Your email address will not be published. Required fields are marked