Radius: Off
Radius:
km Set radius for geolocation
Search

ಮಂಗನಕಾಯಿಲೆಗೆ ಮತ್ತೊಂದು ಬಲಿ

ತೀರ್ಥಹಳ್ಳಿ: ಮಂಗನ ಕಾಯಿಲೆಯಿಂದ ತಾಲೂಕಿನಲ್ಲಿ ಎರಡನೇ ಸಾವು ಸಂಭವಿಸಿದೆ. ಕೆಎಫ್​ಡಿ ಸೋಂಕಿನಿಂದ ಬಳಲುತ್ತಿದ್ದ ಕುಕ್ಕೆ ಬಾಂಡ್ಯ ಗ್ರಾಪಂ ವ್ಯಾಪ್ತಿಯ ರಾಜು (55) ಎಂಬುವವರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜು ಅವರು ಕಳೆದ ಒಂದು ತಿಂಗಳಿನಿಂದ ಜ್ವರದಿಂದ ನರಳುತ್ತಿದ್ದರು. ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಫೆಬ್ರವರಿ 12ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಕೂಡ ಮಂಡಗದ್ದೆಯ ಒಬ್ಬರಿಗೆ ಕೆಎಫ್​ಡಿ ಸೋಂಕು ತಗುಲಿರುವುದು ಧೃಡಪಟ್ಟಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು ಮಂಡಗದ್ದೆ ಸಮೀಪದ ತೋಟದಕೊಪ್ಪದ ಲಚ್ಚಪೂಜಾರಿ ಈ ಮಹಾಮಾರಿಗೆ ಬಲಿಯಾಗಿದ್ದರು.

Leave a Reply

Your email address will not be published. Required fields are marked