Radius: Off
Radius:
km Set radius for geolocation
Search

ಪಾರಮ್ಯ ಮೆರೆದ ಬಿಎಸ್‌ವೈ

ಶಿವಮೊಗ್ಗ: ಮತ್ತೆ ಯಡಿಯೂರಪ್ಪ ಗೆದ್ದಿದ್ದಾರೆ. ಶಿಕಾರಿಪುರದಲ್ಲಿ ತಮ್ಮ ಹಿಡಿತ ಏನು ಎಂಬುದನ್ನು ಎಂಟನೇ ಬಾರಿ ಗೆಲ್ಲುವ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ. ತಾವು ಮಾತ್ರವಲ್ಲ, ಜಿಲ್ಲೆಯಲ್ಲಿ ದೊಡ್ಡ ತಂಡದೊಂದಿಗೆ ಅರ್ಹ ಗೆಲುವು ಸಾಧಿಸಿದ್ದಾರೆ.

1983ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ ಯಡಿಯೂರಪ್ಪ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. 1999ರಲ್ಲಿ ಮೊದಲ ಸೋಲನ್ನು ಅನುಭವಿಸಿದರು. ಬಳಿಕ ನಡೆದ ಎಲ್ಲ ಚುನಾವಣೆ  ಗಳಲ್ಲಿಯೂ ಅವರು ಗೆಲುವನ್ನು ದಾಖಲಿಸುತ್ತಲೇ ಬಂದಿದ್ದಾರೆ. 2008ರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಸಂದರ್ಭ ಭದ್ರಾವತಿ ಹೊರತುಪಡಿಸಿ ಎಲ್ಲ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಂಡು ಬಂದಿದ್ದರು. ಬಳಿಕ ಮುಖ್ಯಮಂತ್ರಿಯೂ ಆದರು. ಅದೇ ರೀತಿ ಈ ಬಾರಿಯೂ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ.

ಶಿವಮೊಗ್ಗದಲ್ಲಿ ಈಶ್ವರಪ್ಪನವರಿಗೆ ಲಿಂಗಾಯತ ಮತಗಳು ಪೂರ್ಣವಾಗಿ ದಕ್ಕುವಂತೆ ನೋಡಿಕೊಂಡರು. ಸಾಗರದಲ್ಲಿ ಬಲಿಷ್ಟ ಕಾಗೋಡು ಎದುರು ಹರತಾಳು ಅವರನ್ನು ನಿಲ್ಲಿಸಿ ಗೆಲ್ಲಿಸಿದರು. ಸೊರಬಕುಮಾರ್‌ ಬಂಗಾರಪ್ಪ ಅವರ‌ು ಪಕ್ಷಕ್ಕೆ ಕರೆ ತಂದು ಗೆಲ್ಲಿಸಿದರು. 2008ರಲ್ಲಿ ಮುಖ್ಯಮಂತಿಎಂದು ಘೋಷಣೆಯಾದಾಗ ಇವರ ವಿರುದ್ಧ ಸಮಾಜವಾದಿ ಪಕ್ಷದಿಬಂಗಾರಪ್ಪ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಭ್ಯರ್ಥಿಯನ್ನೇ ಹಾಕದೆ ಬಂಗಾರಪ್ಪನವರನ್ನು ಬೆಂಬಲಿಸುವ ಮೂಲಕ ಯಡಿಯೂರಪ್ಪ ಅವರನ್ನು ಮಣಿಸುವ ಯತ್ನ ನಡೆಸಿದ್ದರು. ಆದರೆ ಆಗ ದಾಖಲೆಯ ಸುಮಾರು 45 ಸಾವಿರ ಮತಗಳ ಅಂತರದಿಂದ ಯಡಿಯೂರಪ್ಪ ಗೆಲುವು ದಾಖಲಿಸಿದ್ದರು. ಈ ಬಾರಿ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ಅವರ ಎದುರು ಕಾಂಗ್ರೆಸ್‌ ನಿಂದ ಬಲಿಷ್ಟ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಮೂಲಕ ಯಡಿಯೂರಪ್ಪ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿ ಹಾಕುವ ಯೋಜನೆ ರೂಪುಗೊಂಡಿತ್ತು. ಆದರೆ ಕಾಂಗ್ರೆಸ್‌ ಟಿಕೆಟ್‌ ಪ್ರಕಟವಾದಾಗ ದುರ್ಬಲ ಅಭ್ಯರ್ಥಿ ಎಂದೇ ಪರಿಗಣಿತವಾಗಿದ್ದ ಗೋಣಿ ಮಾಲತೇಶ್‌ ಟಿಕೆಟ್‌
ಪಡೆದಿದ್ದರು. ಯಡಿಯೂರಪ್ಪ ಪಾಳಯ ಸಂತಸ ಪಟ್ಟಿತ್ತು. ಆದರೆ ಚುನಾವಣಾ ಪ್ರಚಾರ ಮುಂದುವರಿಯುತ್ತಿಂತೆ ಕಾಂಗ್ರೆಸ್‌ ನವಾಗಿ ಗಟ್ಟಿಯಾಗತೊಡಗಿ ಬಿಜೆಪಿ ಪಾಳಯದಲ್ಲಿ ಸೃಷ್ಟಿಯಾಗುವಂತೆ 2008ಕ್ಕೆ ಹೋಲಿಸಿದರೆ ಈ ಬಾರಿ ದುರ್ಬಲ ಅಭ್ಯರ್ಥಿ ‌ಆಗಿರುದರಿಂದ ಗೆಲುವಿನಅಂತರವನ್ನು ಕನಿಷ್ಟ 50 ಸಾವಿರೇಕೆಂಬ ಯಡಿಯೂರಪ್ಪ ಆಶಯಕ್ಕೆ ಧಕ್ಕೆ ಬರುವ ಲಕ್ಷಣ ಕಂಡುಬಂದಿತ್ತು. ಫಲಿತಾಂಶ ಬಂದಾಗ ಅರ್ಹ
ಗೆಲುವು ದಕ್ಕಿದರೂ ದಾಖಲೆಯ ಅಂತರದ ಗೆಲುವು ಪಡೆಯಲಾಗಲಿಲ್ಲ.

35 ಸಾವಿರ ಮತಗಳ ಗೆಲುವಿನ ಅಂತರವಿತ್ತು.ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಗೆಲುವು ಉತ್ತಮವಾಗಿಯೇ ಇದೆ. 2013ರ ಚುನಾವಣೆಯಲ್ಲಿ ಯಡಿಯೂರಪ್ಪನವರು 24 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಳಿಕ 2014ರ ಉಪಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ಗೆಲುವಿನ ಅಂತರ 6 ಸಾವಿರಕ್ಕೆ ಇಳಿದಿತ್ತು. ಈ ಬಾರಿಯ ಗೆಲುವಿನ ಅಂತರ ಉತ್ತಮವಾಗಿಯೇ
ಇದೆ. ಕ್ಷೇತ್ರದಲ್ಲಿ ಬಿಗಿಯಾದ ಹಿಡಿತ ಹೊಂದಿರುವುದರಿಂದ ಮತ್ತು ಇಡೀ ಕ್ಷೇತ್ರದಾದ್ಯಂತ ಸಂಘಟನೆ ಗಟ್ಟಿಯಾಗಿರುವುದು ಯಡಿಯೂರಪ್ಪ ಅವರ ಪ್ಲಸ್‌ ಪಾಯಿಂಟ್‌. ಹೀಗಾಗಿ ಜೊತೆಗಿದ್ದ ಶಾಂತವೀರಪ್ಪ ಗೌಡ ಸೇರಿದಂತೆ ಕೆಲವರು ಕಾಂಗ್ರೆಸ್‌ ಪಕ್ಷ ಸೇರಿ ಅವರನ್ನು ಮಣಿಸಲು ಇನ್ನಿಲ್ಲದ ಯತ್ನ
ನಡೆಸಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಯಡಿಯೂರಪ್ಪ ಅವರ ಅಂತರ ಕಡಿಮೆಯಾಗುವಲ್ಲಿ ಜೆಡಿಎಸ್‌ ಪಾತ್ರವೂ ಇದೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಳಿಗಾರ್‌ ಭಾರೀ ಮತ ಪಡೆಯದಿದ್ದರೂ 13 ಸಾವಿರ ಮತ ಪಡೆದಿದ್ದಾರೆ.

Leave a Reply

Your email address will not be published. Required fields are marked