Radius: Off
Radius:
km Set radius for geolocation
Search

ನೌಕರರಿಗೆ ರಾಜ್ಯ ಸರಕಾರ ಅನ್ಯಾಯ: ಟೀಕೆ

ಶಿವಮೊಗ್ಗ : 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ರಾಜ್ಯ ಸರಕಾರಿ ನೌಕರರು ಏ.1ರಿಂದಲೇ ಅನ್ವಯವಾಗುವಂತೆ ವೇತನ ಪಡೆಯಲು ನೀತಿ ಸಂಹಿತೆ ಜಾರಿಯಿಂದ ಹಿನ್ನಡೆಯಾಗಿದ್ದು, ನೌಕರರು ಆತಂಕದಲ್ಲಿದ್ದಾರೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಚುನಾವಣಾ ದೃಷ್ಟಿಯಿಂದ ರಾಜ್ಯ ಸರಕಾರ ನೌಕರರ ಮೂಲಭೂತ ಬೇಡಿಕೆಯಾದ ವೇತನ ಹೆಚ್ಚಳವನ್ನು ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಜಾರಿ ಮಾಡಿದೆ ಎಂದು ದೂರಿದರು.

ಮೇ ಮೊದಲ ವಾರದಲ್ಲಿ ಪರಿಷ್ಕೃತ ವೇತನ ಪಡೆಯಲು ಸರಕಾರಿ ನೌಕರರ ಸಮುದಾಯವು ಕೇಂದ್ರ ಚುನಾವಣಾ ಆಯೋಗದ ಹಸಿರು ನಿಶಾನೆಗೆ ಕಾಯುವಂತಾಗಿದೆ. ಹೊಸ ವೇತನ ಶ್ರೇಣಿ ಏ.1ರಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಮಾ.1ರಂದು ತರಾತುರಿಯಲ್ಲಿ ಆದೇಶ ಹೊರಡಿಸಿದೆ ಎಂದರು.

ವೇತನದ ಫಿಟ್‌ಮೆಂಟ್‌ ಬುಕ್‌ ಸಹಿತ ಅಧಿಸೂಚನೆ ಹೊರಡಿಸುವುದು ವಿಳಂಬವಾಗಿದ್ದರಿಂದ ಇದೀಗ ಹಣಕಾಸು ಇಲಾಖೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಕೋರಿದೆ. ಆಯೋಗದ ಅನುಮತಿ ಸಿಗುವುದು ವಿಳಂಬವಾಗುವ ಸಾಧ್ಯತೆ ಇರುವುದರಿಂದ ಹಾಗೂ ವಿಧಾನಸಭಾ ಚುನಾವಣೆ ಮುಗಿದ ನಂತರ ವಿಧಾನ ಪರಿಷತ್‌ ಚುನಾವಣೆಗೆ ಅಧಿಸೂಚನೆ ಹೊರಡಲಿದ್ದು, ನಂತರ ಸ್ಥಳೀಯ ಸಂಘ ಸಂಸ್ಥೆಗಳಿಗೆ ಚುನಾವಣೆಗಳು ನಡೆಯುವುದರಿಂದ ನೌಕರರು ಪರಿಷ್ಕೃತ ವೇತನ ಪಡೆಯಲು ಸಾಕಷ್ಟು ತಿಂಗಳು ಕಾಯಬೇಕಾಗುತ್ತದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಗಿದ್ದ ಮಂಜೇಗೌಡರು ಪರಿಷ್ಕೃತ ವೇತನ ಜಾರಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದರೂ ಸಹ ರಾಜಕೀಯದ ಆಮಿಷಕ್ಕೆ ಒಳಗಾಗಿ ಪರಿಷ್ಕೃತ ವೇತನದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ಅನುಮಾನವಿದೆ. ಮಂಜೇಗೌಡರು ರಾಜ್ಯ ಸರಕಾರಿ ನೌಕರರ ಹೋರಾಟವನ್ನು ನಿರ್ಲಕ್ಷ ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಹಾಗೂ ಕುತಂತ್ರದ ರಾಜಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಿ, ಮೂಗಿಗೆ ತುಪ್ಪ ಹಚ್ಚಿ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಸರಕಾರಿ ನೌಕರರ ಕ್ಷ ಮೆಯಾಚಿಸಬೇಕೆಂದು ಒತ್ತಾಯಿಸಿದರು.

ಪಕ್ಷ ದ ಮುಖಂಡರಾದ ಎಸ್‌.ದತ್ತಾತ್ರಿ, ಬಿ.ಆರ್‌. ಮಧುಸೂದನ್‌, ರತ್ನಾಕರ ಶೆಣೈ, ದೇವರಾಜ್‌ ಮಂಡೇನಕೊಪ್ಪ, ಹಿರಣ್ಣಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked