Radius: Off
Radius:
km Set radius for geolocation
Search

ಕೃಷಿ, ತೋಟಗಾರಿಕೆ ವಿವಿ ಸುಗ್ಗಿ ಸಂಭ್ರಮ

ಶಿವಮೊಗ್ಗ: ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿಯ 4ನೇ ಘಟಿಕೋತ್ಸವ ‘ಸುಗ್ಗಿ ಸಂಭ್ರಮ-4’ ಮಾ.9ರ ಬೆಳಗ್ಗೆ 11ಕ್ಕೆ ವಿವಿ ಆವರಣದಲ್ಲಿ ನಡೆಯಲಿದೆ ಎಂದು ವಿವಿ ಕುಲಪತಿ ಡಾ. ಎಂ.ಕೆ.ನಾಯ್್ಕ ತಿಳಿಸಿದರು.

ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಿ.ಆರ್.ವಾಲಾ ಪದವಿ ಪ್ರದಾನ ಮಾಡಲಿದ್ದಾರೆ. ಸಹ ಕುಲಾಧಿಪತಿ, ಕೃಷಿ ಸಚಿವ ಶಿವಶಂಕರ ರೆಡ್ಡಿ ಉಪಸ್ಥಿತರಿರಲಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್​ನ ಕಾರ್ಯದರ್ಶಿ ಡಾ.ತ್ರಿಲೋಚನ ಮಹಾಪಾತ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

344 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:2018-19ನೇ ಸಾಲಿನಲ್ಲಿ ಒಟ್ಟು 344 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದು, ಇದರಲ್ಲಿ 278 ವಿದ್ಯಾರ್ಥಿಗಳು ಘಟಿಕೋತ್ಸವ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. 11 ವಿದ್ಯಾರ್ಥಿಗಳು ಪಿಎಚ್​ಡಿ ಪದವಿ ಪಡೆಯಲಿದ್ದಾರೆ. ರ್ಯಾಂಕ್ ಪಡೆದ 16 ವಿದ್ಯಾರ್ಥಿನಿಯರು ಹಾಗೂ 7 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ಕುಲಪತಿ ತಿಳಿಸಿದರು.

ವಿವಿಯ ಕುಲಸಚಿವ ಡಾ.ಪಿ.ನಾರಾಯಣ ಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ, ವಿವಿಯ ಹಣಕಾಸು ನಿಯಂತ್ರಣಾಧಿಕಾರಿ ಗಣೇಶಪ್ಪ, ಶಿಕ್ಷಣ ನಿರ್ದೇಶಕ ಡಾ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ವಿವಿಧ ವಿವಿಗಳೊಂದಿಗೆ ಒಡಂಬಡಿಕೆ:ಶಿವಮೊಗ್ಗ ವಿವಿಯಿಂದ ಕೇಂದ್ರೀಯ ಲವಣ ಮಣ್ಣಿ ಸಂಶೋಧನಾ ಸಂಸ್ಥೆ, ಇಟಲಿಯ ಪಡೋವಾ ವಿವಿ, ದೆಹಲಿಯ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಹಾಗೂ ಬೆಂಗಳೂರಿನ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಡಾ. ಎಂ.ಕೆ.ನಾಯ್್ಕ ತಿಳಿಸಿದರು. ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಿಂದ 176 ಕ್ವಿಂಟಾಲ್ ಜೈವಿಕ ಗೊಬ್ಬರ ಹಾಗೂ ಜೈವಿಕ ನಿಯಂತ್ರಣ ಸೂಕ್ಷಾ್ಮಣುಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ 17.62 ಲಕ್ಷ ರೂ. ಆದಾಯ ಪಡೆಯಲಾಗಿದೆ. 815 ಕೆಜಿ ಜೇನುತುಪ್ಪವನ್ನೂ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked