ಏಪ್ರಿಲ್‌ ಫೂಲ್‌ ಅಲ್ಲ, ‘ಕೂಲ್‌’ ಡೇ

ಏಪ್ರಿಲ್‌ ಫೂಲ್‌ ಅಲ್ಲ, ‘ಕೂಲ್‌’ ಡೇ

ಏಪ್ರಿಲ್‌ ಫೂಲ್‌ ಅಲ್ಲ, ‘ಕೂಲ್‌’ ಡೇ

ಭದ್ರಾವತಿ : ಏಪ್ರಿಲ್ ಬಂತೆಂದರೆ ‘ಫೂಲ್’ ಮಾಡುವದಕ್ಕೊಂದು ಕಾರಣ ಹುಡುಕುವ ಈ ದಿನಮಾನದಲ್ಲಿ ಭದ್ರಾವತಿ ನಗರದ ಇರುವೆ ಟ್ರಸ್ಟ್ ‘ ಏಪ್ರಿಲ್ ಕೂಲ್’ ಎಂಬ ಹೆಸರಲ್ಲಿ ಸಸಿ ನೆಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಿತು.

ತಮ್ಮ ಸ್ವಾರ್ಥಕ್ಕಾಗಿ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡುತ್ತಿರುವ ವರ್ಗ ಒಂದೆಡೆಯಾದರೆ, ಇದೇ ಸಂಪತ್ತನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳ ಇನ್ನೊಂದು ವರ್ಗ ಪ್ರಯತ್ನ ಮಾಡುತ್ತಲೇ ಇದೆ. ಇಂತಹ ಪ್ರಯತ್ನಕ್ಕೆ ಭದ್ರಾವತಿಯಇರುವೆ ಕಾರ್ಯೋನ್ಮುಖವಾಗಿದೆ.

ಸೋಮವಾರ ಸಂಜೆ ನ್ಯೂಟೌನ್ ಜಂಟ್ಸ್ ಕ್ಲಬ್ ಆವರಣದಲ್ಲಿ ಅರಣ್ಯ ವಲಯಾಧಿಕಾರಿ ದಿನೇಶ್ ನೇತೃತ್ವದಲ್ಲಿ ನಗರದ ಇರುವೆ ಟ್ರಸ್ಟ್ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬಯಲು ಪ್ರದೇಶ ಹಾಗು ರಸ್ತೆ ಬದಿಗಳಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಿ ನೀರೆರುವ ಮೂಲಕ ಸಂರಕ್ಷಿಸುವಂತಾದಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳುವಂತಾಗಲಿದೆ. ಕೇವಲ ಸಸಿಗಳನ್ನು ನೆಡುವುದರಿಂದ ಪರಿಸರ ಉಳಿಸಲು ಅಸಾಧ್ಯ.. ಸಸಿ ನೆಡುವುದರ ಮೂಲಕ ಅವುಗಳಿಗೆ ನೀರೆರೆದು ಪೋಷಿಸುವಂತಾದಲ್ಲಿ ಮಾತ್ರ ಸಾಧ್ಯ ಎಂದರು. ಟ್ರಸ್ಟ್ ಅಧ್ಯಕ್ಷ ಬಿ.ಎಂ.ಶಾಂತಕುಮಾರ್ ಪದಾಧಿಕಾರಿಗಳಾದ ಬಿ.ಕಿರಣ್ಕುಮಾರ್, ಕಾರ್ತಿಕ್ ಕೆ.ಕೆದಿಲಾಯ್, ಸದಸ್ಯರಾದ ಬಿ.ಎಂ.ಧಮೇಂದ್ರ, ವಸಂತಕುಮಾರ ರೆಡ್ಡಿ, ಶ್ರೀನಿವಾಸ್, ಸುಮಂತ್, ಲಲಿತ್ಕುಮಾರ್, ಶಕೀನ್, ಪೋಲೀಸ್ ಇಲಾಖೆಯ ಕೆ.ಎಸ್.ರಂಗಸ್ವಾಮಿ, ಜಿ.ಹಾಲಪ್ಪ, ತಮ್ಮಣ್ಣ, ರೇವಣ್ಣ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked