Radius: Off
Radius:
km Set radius for geolocation
Search

ಎರಡನೇ ಸರ್ಜಿಕಲ್ ಸ್ಟ್ರೈಕ್: ಜೈಷ್​ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿ ಬಾಂಬ್​ ದಾಳಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯ 12 ಮಿರಾಜ್‌-2000 ಜೆಟ್‌ ಯುದ್ಧ ವಿಮಾನಗಳು ಒಟ್ಟಿಗೆ ದಾಳಿ ನಡೆಸಿ, ಗಡಿ ನಿಯಂತ್ರಣ ರೇಖೆಯ ಬಳಿಯ ಜೈಷ್​ ಇ ಮೊಹಮ್ಮದ್ ಸಂಘಟನೆ​ಯ ಉಗ್ರರ ಅಡಗುತಾಣಗಳನ್ನು ಸಂಪೂರ್ಣ ನಾಶ ಪಡಿಸಲಾಗಿದೆ.

ಉಗ್ರರ ದಾಳಿಯ ಎರಡು ವಾರಗಳ ಬಳಿಕ ಭಾರತೀಯ ಸೇನೆ ದಾಳಿ ಸೇಡು ತೀರಿಸಿಕೊಂಡಿದ್ದು, ಎರಡನೇ ಸರ್ಜಿಕಲ್‌ ಸ್ಟ್ರೈಕ್‌ ಎಂದೇ ಹೇಳಲಾಗುತ್ತಿದೆ.

ಅಡಗುತಾಣಗಳ ಮೇಲೆ ಮುಂಜಾನೆ 3.30ರ ವೇಳೆಗೆ ನಡೆಸಿದ ದಾಳಿಯಲ್ಲಿ 1000 ಕೆ.ಜಿ ಬಾಂಬ್ ಹಾಕಿ ಉಗ್ರರ ನೆಲೆಯನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ. ದಾಳಿಯಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಕಳೆದ ಫೆ. 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಬಸ್​ಗಳ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಜನ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಪಾಕ್‌ ಮೂಲದ ಜೈಷ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಯು ಹೊತ್ತುಕೊಂಡಿತ್ತು. ಉಗ್ರ ದಾಳಿಗೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ್ದರು.

ದಾಳಿ ಕುರಿತಂತೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಯೋಧರ ಸಾವು ವ್ಯರ್ಥವಾಗಲು ಬಿಡುವುದಿಲ್ಲ. ಉಗ್ರರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ. ಸೇನೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದಿದ್ದರು. ಈ ಬೆನ್ನಲ್ಲೇ ಇದೀಗ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದು ಪ್ರತೀಕಾರ ತೀರಿಸಿಕೊಂಡಂತಾಗಿದೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ಉಗ್ರ ದಾಳಿಗೆ ಪ್ರತೀಕಾರವಾಗಿ ಪದೇ ಪದೆ ಉಗ್ರರ ಉಪಟಳದಿಂದ ಬೇಸತ್ತಿದ್ದ ಭಾರತೀಯ ಸೇನೆಯು 2016ರ ಸೆ. 29ರಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಮೂಲಕ ಗಡಿ ನಿಯಂತ್ರಣ ರೇಖೆಯ ಸುತ್ತ ಇದ್ದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿತ್ತು. (ಏಜೆನ್ಸೀಸ್)

Leave a Reply

Your email address will not be published. Required fields are marked